ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಪೈಶಾಚಿಕ ಕೃತ್ಯವೊಂದು ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
12 ವರ್ಷದ ಬಾಲಕಿಯ ಮೇಲೆ 13- 14 ವರ್ಷದ ಬಾಲಕರು ಸಾಮೂಹಿಕ ಅತ್ಯಾಚಾರ ಮಾಡಿ ಮೊಬೈಲ್ನಲ್ಲಿ ಅದನ್ನು ಚಿತ್ರೀಕರಿಸಿರುವ ಹೇಯ ಘಟನೆ ವರದಿಯಾಗಿದೆ.
ಹುಬ್ಬಳ್ಳಿ ನಗರದ 12 ವರ್ಷದ ಬಾಲಕಿಯನ್ನು ಅದೇ ಪ್ರದೇಶದ ಮೂವರು ಅಪ್ರಾಪ್ತರು ಆಕೆಯ ತಂದೆ ತಾಯಿ ಇಲ್ಲದ ವೇಳೆ ಪೋಸಲಾಯಿಸಿ ಮನೆಯಿಂದ ಕರೆದುಕೊಂಡು ಹೋಗಿದ್ದಾರೆ.
ನಂತರ ನಿರ್ಜನ ಪ್ರದೇಶಕ್ಕೆ ಕರದೊಯ್ದು ಮೂವರು ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿ ಮೊಬೈಲ್ನಲ್ಲಿ ಚಿತ್ರೀಕರಿಸಿ ಯಾರಿಗಾದರೂ ತಿಳಿಸಿದರೆ ಸುಮ್ಮನಿರುವುದಿಲ್ಲ ಎಂದು ಬೆದರಿಕೆ ಹಾಕಿದ್ದಾರೆ.
ಪ್ರಕರಣ ನಡೆದು ಹಲವು ದಿನಗಳಾಗಿದೆ.ಸಂತ್ರಸ್ತ ಬಾಲಕಿ ನೋವನ್ನು ತಾಯಿಗೆ ತಿಳಿಸಿದ್ದಾಳೆ ನಂತರ ಕೃತ್ಯ ಬೆಳಕಿಗೆ ಬಂದಿದೆ.
ಹುಬ್ಬಳ್ಳಿ ಪೊಲೀಸರು ಮೂವರು ಅಪ್ರಾಪ್ತರನ್ನು ವಶಕ್ಕೆ ಪಡೆದು ಅವರ ಬಳಿ ಇದ್ದ ಮೊಬೈಲ್ ಗಳನ್ನು ಸೀಸ್ ಮಾಡಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
