ಮೈಸೂರು: ಮೈಸೂರಿನ ಗಾಯಿತ್ರಿಪುರಂನ ನಿವೃತ್ತ ಸೈನಿಕರ ಕಾಲೋನಿಯಲ್ಲಿ ಚಾಮುಂಡೇಶ್ವರಿ ಅಮ್ಮನ ವಿಶೇಷ ಪೂಜೆ ನೆರವೇರಿಸಲಾಯಿತು.
ಶ್ರೀ ಚಾಮುಂಡೇಶ್ವರಿ ಅಮ್ಮನ ದೇವಾಲಯ ಹಾಗೂ ಶ್ರೀರಾಮ ಯುವಕರ ಮತ್ತು ಹಿರಿಯರ ಸಂಘದ ಸಂಯುಕ್ತ ಆಶ್ರಯದಲ್ಲಿ ಶ್ರೀ ಚಾಮುಂಡೇಶ್ವರಿ ಅಮ್ಮನವರ 26ನೇ ವಾರ್ಷಿಕೋತ್ಸವ ಹಾಗೂ ಆಷಾಢ ಮಾಸದ 4 ಶುಕ್ರವಾರ ಮತ್ತು 4 ಮಂಗಳವಾರಗಳ ವಿಶೇಷ ಪೂಜಾ ಕಾರ್ಯಕ್ರಮಗಳನ್ನು ಅದ್ಧೂರಿಯಾಗಿ ಆಚರಿಸಲಾಯಿತು.
ಪ್ರಧಾನ ಅರ್ಚಕ ದರ್ಶನ್ ದೀಕ್ಷಿತ್ ಅವರ ಸಮ್ಮುಖದಲ್ಲಿ ಅಮ್ಮನವರ ಸನ್ನಿಧಿಯಲ್ಲಿ ಕೊನೆಯ ಆಷಾಢ ಶುಕ್ರವಾರದ ಅಂಗವಾಗಿ ವಿಶೇಷ ಪೂಜೆ ಹಾಗೂ ಪೂರ್ಣಾಹುತಿ ನೆರವೇರಿಸಲಾಯಿತು.
ನಂತರ ಭಕ್ತಾದಿಗಳಿಗೆ ಮೈಸೂರು ಪಾಕ್ ಸೇರಿದಂತೆ ವಿವಿಧ ಪ್ರಸಾದಗಳನ್ನು ವಿತರಿಸಿ, ಭಕ್ತರಿಗೆ ಬಾಳೆ ಎಲೆಯಲ್ಲಿ ಊಟ ಬಡಿಸಿದ್ದು ವಿಶೇಷ.
ಸಂಘದ ಪದಾಧಿಕಾರಿಗಳ ನೇತೃತ್ವದಲ್ಲಿ ಅಧ್ಯಕ್ಷ ಈಶ್ವರಸಿಂಗ್, ಉಪಾಧ್ಯಕ್ಷ ರವಿಸಿಂಗ್, ಕಾರ್ಯದರ್ಶಿ ಸಿ.ಇ. ಶಿವಲಿಂಗಯ್ಯ, ಸಹ ಕಾರ್ಯದರ್ಶಿ ಎಸ್. ನಾಗರಾಜು, ಸಮಿತಿ ಸದಸ್ಯರಾದ ರವಿ (ಕೇಬಲ್), ರವಿಚಂದ್ರನ್ (ಎಸ್.ಬಿ.ಐ.), ಜಯಕುಮಾರ್, ರಾಜ, ಬಾಲಜಿಸಿಂಗ್, ಎಸ್. ಕೃಷ್ಣ, ನಾಗರಾಜು ಗುರುಸ್ವಾಮಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಸಾವಿರಾರು ಭಕ್ತರು ಆಗಮಿಸಿ ಶ್ರೀ ಚಾಮುಂಡೇಶ್ವರಿ ಅಮ್ಮನವರ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು.
