ನಂಜನಗೂಡು: ಪಕ್ಕದ ಮನೆಯಾತ ಸುಮ್ಮನೆ ಮಾನಸಿಕ ಕಿರುಕುಳ ನೀಡುತ್ತಿದ್ದಾರೆಂದು ನಂಜನಗೂಡು ತಾಲೂಕು ಛತ್ರ ಹೋಬಳಿ,ಬಿದರಗೋಡು ಗ್ರಾಮದ ನವೀನ ಎಂಬವರು ಗಂಭೀರ ಆರೋಪ ಮಾಡಿದ್ದಾರೆ.
ನಾವು ತಿರುಗಾಡುವ ಗಲ್ಲಿ ಜಾಗಕ್ಕೆ ಪಕ್ಕದ ಮನೆಯಾತ ತೊಂದರೆ ನೀಡುತ್ತಿದ್ದಾನೆ, ಈ ಹಿಂದೆಯೂ ಜಗಳ ನಡೆದಿತ್ತು, ಆ ಬಗ್ಗೆ ಹುಲ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜೊತೆಗೆ ನ್ಯಾಯಾಲಯಕ್ಕೂ ನಾವು ಮೊರೆ ಹೋಗಿದ್ದೇವೆ ಎಂದು ನವೀನ ಅವರು ತಿಳಿಸಿದ್ದಾರೆ.
ಪ್ರಕರಣ ಮುಗಿಯುವ ತನಕ ನಮ್ಮ ಮನೆ ಕಡೆ ಇರುವ ನೆರೆ ಮನೆಯವರ ಕಿಟಕಿ ತೆರೆಯಬಾರದು ಎಂದು ಪೊಲೀಸರು ತಿಳಿಸಿದ್ದಾರೆ.ಆದರೆ ಇದನ್ನು ಮೀರಿ ವಿನಾ ಕಾರಣ ಕಿಟಕಿ ತೆರೆದು ನಮ್ಮ ಮನೆ ಕಡೆ ನೋಡುತ್ತಾರೆ.
ಅವರ ಮನೆಯ ಕಿಟಕಿಯಿಂದ ನಮ್ಮ ಮನೆಯ ಸ್ನಾನದ ಕೊಠಡಿ ಕಾಣಿಸುತ್ತದೆ. ಇದರಿಂದ ನನಗೆ ಮತ್ತು ನಮ್ಮ ಮನೆಯವರಿಗೆ ಮಾನಸಿಕ ಹಿಂಸೆ ಆಗುತ್ತಿದೆ ಎಂದು ನವೀನ್ ಅಳಲು ತೋಡಿಕೊಂಡಿದ್ದಾರೆ.
ಈ ಬಗ್ಗೆ ಹುಲ್ಲಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದೇನೆ,ಆದರೆ ಅವರು ಈವರೆಗೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ.
ಆದ್ದರಿಂದ ಪೊಲೀಸ್ ವರಿಷ್ಠಾದಿಕಾರಿಗಳು ಮಧ್ಯ ಪ್ರವೇಶಿಸಿ ನ್ಯಾಯ ಕೊಡಿಸಬೇಕೆಂದು ನವೀನ್ ವರ್ಷಿಣಿ ನ್ಯೂಸ್ ವೆಬ್ ಪೋರ್ಟಲ್ ಮೂಲಕ ಮನವಿ ಮಾಡಿದ್ದಾರೆ.
