ಮೈಸೂರು: ಮೈಸೂರು ನಗರದ 50ನೇ ವಾರ್ಡ್, ಬೆಸ್ತಕೇರಿ ಪ್ರದೇಶದಲ್ಲಿ ನೀರಿನ ಮೀಟರ್ ಕಳ್ಳತನ ಪ್ರಕರಣಗಳು ಮುಂದುವರಿದಿದ್ದು,ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಳಗಿನ ಜಾವ ಎರಡು ಮನೆಗಳ ಮುಂದೆ ಕಾಂಪೌಂಡ್ ಬಳಿ ಅಳವಡಿಸಲಾಗಿದ್ದ ನೀರಿನ ಮೀಟರ್ಗಳನ್ನು ಕಳ್ಳರು ಕದ್ದೊಯ್ದಿದ್ದಾರೆ.
ಕಳೆದ ವಾರ ಕೂಡಾ ಇದೇ ಪ್ರದೇಶದ ಒಂದು ಮನೆಯಲ್ಲಿ ಮೀಟರ್ ಕಳ್ಳತನ ನಡೆದಿತ್ತು,ಈಗ ಮತ್ತೆ 2 ಮನೆಗಳಲ್ಲಿ ಈ ರೀತಿ ಕಳ್ಳತನ ನಡೆದಿದೆ ಎಂದು ಸ್ಥಳೀಯ ನಿವಾಸಿಗಳು ಆರೋಪಿಸಿದ್ದಾರೆ.
ಮನೆಗಳ ಮುಂದೆ ಅಳವಡಿಸಲಾಗಿದ್ದ ಮೀಟರ್ ಗಳನ್ನು ಉದ್ದೇಶಪೂರ್ವಕವಾಗಿ ತೆಗೆದಿದ್ದಾರೆ ಎಂದು ಮನೆಗಳವರು ದೂರಿದ್ದಾರೆ.
ಮನೆಯ ನಿವಾಸಿಗಳು ಲಕ್ಷ್ಮೀಪುರಂ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಕಳ್ಳರನ್ನು ಪತ್ತೆಹಚ್ಚಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ನಿವಾಸಿಗಳು ಒತ್ತಾಯಿಸಿದ್ದಾರೆ.
ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ರಾತ್ರಿ ವೇಳೆ ಪೊಲೀಸ್ ಗಸ್ತು ಹಾಕಬೇಕೆಂದು ಜನ ಆಗ್ರಹಿಸಿದ್ದಾರೆ.
