ಟೆಹ್ರಾನ್: ಇರಾನ್ನ ಮೇಲೆ ದಾಳಿ ಮುಂದುವರಿಸಿರುವ ಇಸ್ರೇಲ್ ಹಾಗೂ ಅಮೆರಿಕ ದಾಳಿಯಿಂದಾಗಿ ಸಾವಿನ ಸಂಖ್ಯೆ 790ಕ್ಕೆ ಏರಿದೆ.
ಸೋಮವಾರ, ಸಾವಿನ ಸಂಖ್ಯೆ 555 ಇದ್ದುದು ಮಂಗಳವಾರ ಇರಾನ್ನ ಪರಮಾಣು ಸೌಲಭ್ಯದ ಮೇಲಿನ ದಾಳಿ ಬಳಿಕ ಸಾವಿನ ಸಂಖ್ಯೆ 790ಕ್ಕೆ ಏರಿಕೆಯಾಗಿದೆ.
ಇರಾನ್ ಪ್ರದೇಶದ ಮೇಲೆ ಅಮೆರಿಕ-ಇಸ್ರೇಲ್ ವೈಮಾನಿಕ ದಾಳಿಯ ನಂತರ ಸಂಘರ್ಷ ಪ್ರಾರಂಭವಾಯಿತು. ಈ ದಾಳಿಗಳು ಖಮೇನಿ ಮತ್ತು ಅವರ ಕುಟುಂಬದ ಇತರ ಸದಸ್ಯರು ಸೇರಿದಂತೆ ಉನ್ನತ ಮಿಲಿಟರಿ ಮತ್ತು ರಾಜಕೀಯ ನಾಯಕರ ಜೀವಗಳನ್ನು ಬಲಿ ಪಡೆದಿವೆ.
ಇದರಿಂದ ರೊಚ್ಚಿಗೆದ್ದ ಇರಾನ್ ಸೇಡು ತೀರಿಸಿಕೊಳ್ಳುವ ಹಪಾಹಪಿಯಲ್ಲಿ ಗಲ್ಫ್ನಾದ್ಯಂತ ಅಮೆರಿಕದ ಮಿಲಿಟರಿ ತಾಣಗಳು ಮತ್ತು ಪ್ರಾದೇಶಿಕ ಮಿತ್ರರಾಷ್ಟ್ರಗಳ ಮೇಲೆ ಸರಣಿ ಕ್ಷಿಪಣಿ ಮತ್ತು ಡ್ರೋನ್ ದಾಳಿಗಳನ್ನು ನಡೆಸುತ್ತಲೇ ಇದೆ.
ಬಹ್ರೇನ್, ಇರಾಕ್, ಕುವೈತ್ ಮತ್ತು ಯುಎಇಗಳಲ್ಲಿನ 6 ಯುಎಸ್ ಮಿಲಿಟರಿ ಸ್ಥಳಗಳನ್ನು ಹೊಡೆದುರುಳಿಸಲಾಗಿದೆ ಎಂದು ಹೇಳಲಾಗುತ್ತಿದೆ.
ಇರಾನ್ನ ದಾಳಿಗಳು ಇತರ ಗಲ್ಫ್ ರಾಷ್ಟ್ರಗಳಿಗೂ ವಿಸ್ತರಿಸಿದ್ದು, ಕ್ಷಿಪಣಿಗಳು ಮತ್ತು ಡ್ರೋನ್ಗಳು ಯುನೈಟೆಡ್ ಅರಬ್ ಎಮಿರೇಟ್ಸ್ ಮತ್ತು ಅದರಾಚೆಗಿನ ನಾಗರಿಕ ಮೂಲಸೌಕರ್ಯ, ವಿಮಾನ ನಿಲ್ದಾಣಗಳು ಮತ್ತು ವಾಣಿಜ್ಯ ಕೇಂದ್ರಗಳನ್ನು ಗುರಿಯಾಗಿಸಿಕೊಂಡಿವೆ.
ಸ್ಪೋಟಕಗಳಿಂದ ದುಬೈ ಮತ್ತು ಅಬುದಾಬಿಯಲ್ಲಿ ಸಾವುನೋವುಗಳು ಹೆಚ್ಚಗುವಂತೆ ಮಾಡಿದೆ.ಸಾಕಷ್ಟು ಆಸ್ತಿ ಹಾನಿಯನ್ನುಂಟುಮಾಡಿವೆ.
ಯುಎಸ್, ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧವು ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ.
ಇರಾನ್ನ ಭೂಗತ ನಟಾಂಜ್ ಪರಮಾಣು ಕೇಂದ್ರದಲ್ಲಿ ಹಾನಿ ಸಂಭವಿಸಿದ್ದು, ಸಾವಿನ ಸಂಖ್ಯೆ ಹೆಚ್ಚುತ್ತಿದೆ.
