ಮೈಸೂರು: ಕೇಂದ್ರ ಸರ್ಕಾರದ ಸ್ವಚ್ಛ ಸರ್ವೇಕ್ಷಣ ಅಭಿಯಾನದ ಮೇರೆಗೆ ಮೈಸೂರಿನಲ್ಲೂ ಸರ್ವೇಕ್ಷಣೆ ಕಾರ್ಯ ಪ್ರಾರಂಭವಾಗಿದೆ.
ಮೈಸೂರಿನ ಪ್ರತಿ ವಾರ್ಡಿನಲ್ಲೂ ಸರ್ವೇಕ್ಷಣೆ ಅಸೆಸ್ಮೆಂಟ್ ಗಳು ಮಾಹಾನಗರ ಪಾಲಿಕೆ ಸಿಬ್ಬಂದಿಗಳ ಸಹಕಾರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಇಂದು ಸಿದ್ದಾರ್ಥ ನಗರದಲ್ಲಿ ಸ್ವಚ್ಛ ಸರ್ವೇಕ್ಷಣೆ ಕಾರ್ಯ ಮಾಡಲಾಯಿತು.
ಮನೆ,ಮನೆಗೆ ಸ್ವಚ್ಛ ಸರ್ವೇಕ್ಷಣೆ ಅಸೆಸ್ಮೆಂಟ್ ಸಂಜೀವ್ ಕುಮಾರ್ ಅವರ ನೇತೃತ್ವದಲ್ಲಿ ಪಾಲಿಕೆ ಸಿಬ್ಬಂದಿ ಭೇಟಿ ನೀಡಿ ಹಸಿ ಕಸ,ಒಣ ಕಸ,ಸ್ಯಾನಿಟರಿ ವಸ್ತುಗಳು,ಪ್ಲಾಸ್ಟಿಕ್ ಕವರ್ ಮತ್ತು ವಸ್ತುಗಳನ್ನು ಹೇಗೆ ವಿಂಗಡಿಸಬೇಕೆಂಬ ಬಗ್ಗೆ ತಿಳುವಳಿಕೆ ನೀಡಿದರು.
ಚರಂಡಿಗಳಲ್ಲಿ ಕಸ ಹಾಕಬಾರದು ತ್ಯಾಜ್ಯಗಳನ್ನು ಕಟ್ಟುನಿಟ್ಟಾಗಿ ಪೌರ ಕಾರ್ಮಿಕರಿಗೆ ವಿಂಗಡಿಸಿಯೇ ನೀಡಬೇಕೆಂದು ಸೂಚಿಸಲಾಯಿತು.
