ಬೆಂಗಳೂರು: ಮನೋರಂಜನ್ ಪ್ರಧಾನ್ ಅವರು ರೈಲು ಗಾಲಿ ಕಾರ್ಖಾನೆಯ ಮಹಾ ಪ್ರಬಂಧಕರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.
ಮನೋರಂಜನ್ ಪ್ರಧಾನ್ ಅವರು ಫೆ.18 ರಂದು ಬೆಂಗಳೂರಿನ ರೈಲು ಗಾಲಿ ಕಾರ್ಖಾನೆಯ ಮಹಾ ಪ್ರಬಂಧಕರಾಗಿ ಅಧಿಕಾರ ವಹಿಸಿಕೊಂಡರು.
ಈ ನಿಯೋಜನೆಗೆ ಮುನ್ನ, ಪ್ರಧಾನ್ ಅವರು ಇಂಟೆಗ್ರಲ್ ಕೋಚ್ ಫ್ಯಾಕ್ಟರಿಯಲ್ಲಿ ಪ್ರಧಾನ ಮುಖ್ಯ ಸಾಮಗ್ರಿ ಪ್ರಬಂಧಕರಾಗಿ ಸೇವೆ ಸಲ್ಲಿಸಿದ್ದಾರೆ.
ಬುರ್ಲಾ ಯೂನಿವರ್ಸಿಟಿ ಕಾಲೇಜ್ ಆಫ್ ಇಂಜಿನಿಯರಿಂಗ್ ನಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವೀಧರರಾಗಿದ್ದು, ಇಂಡಿಯನ್ ರೈಲ್ವೆ ಸ್ಟೋರ್ಸ್ ಸರ್ವೀಸ್ ಕೇಡರ್ ಮೂಲಕ ಭಾರತೀಯ ರೈಲ್ವೆಯನ್ನು ಸೇರುವ ಮುನ್ನ ಟಾಟಾ ಮೋಟರ್ಸ್ ನಲ್ಲಿ ತಮ್ಮ ವೃತ್ತಿಯನ್ನು ಆರಂಭಿಸಿದರು.
ಎಂ. ಪ್ರಧಾನ್ ಅವರು ಬೃಹತ್ ರೈಲ್ವೆ ಸಂಸ್ಥೆಗಳಲ್ಲಿ ಮಹತ್ವದ ಹುದ್ದೆಗಳಲ್ಲಿ ಸೇವೆಯನ್ನು ಸಲ್ಲಿಸಿರುವುದರಿಂದ ಅಮೂಲ್ಯ ಮತ್ತು ವೈವಿಧ್ಯಮಯ ಅನುಭವವನ್ನು ಹೊಂದಿದ್ದಾರೆ.
ಅವರು ಖರಗ್ಪುರದಲ್ಲಿ ವಿಭಾಗೀಯ ರೈಲ್ವೆ ಪ್ರಬಂಧಕರಾಗಿ ಕಾರ್ಯ ನಿರ್ವಹಿಸಿದ್ದು, ಐಸಿಎಫ್ ನಲ್ಲಿನ ಅವರ ಸೇವೆಯೊಂದಿಗೆ ಚಿತ್ತರಂಜನ್ ಲೋಕೋಮೋಟಿವ್ ವರ್ಕ್ಸ್, ಪೂರ್ವ ರೈಲ್ವೆ, ದಕ್ಷಿಣ ಪೂರ್ವ ರೈಲ್ವೆ, ನೈಋತ್ಯ ರೈಲ್ವೆ ಮತ್ತು ದಕ್ಷಿಣ ರೈಲ್ವೆಯಲ್ಲಿ ಪ್ರಮುಖ ನಿಯೋಜನೆಗಳನ್ನು ನಿರ್ವಹಿಸಿದ್ದಾರೆ.
ಮಹಾ ಪ್ರಬಂಧಕರು ಐಸಿಎಫ್ ಹುದ್ದೆಗೆ ಸಹವರ್ತಿಯಾಗಿ ರೈಲು ಗಾಲಿ ಕಾರ್ಖಾನೆಯ ಮಹಾ ಪ್ರಬಂಧಕರ ಹುದ್ದೆಯನ್ನು ಹೊಂದಿದ್ದ ಯು. ಸುಬ್ಬ ರಾವ್ ಅವರಿಂದ ಅಧಿಕಾರವನ್ನು ಪ್ರಧಾನ್ ವಹಿಸಿಕೊಂಡರು.
