ಮೈಸೂರು: ಮಾಜಿ ಸಂಸದ ಪ್ರತಾಪ್ ಸಿಂಹ ಅವರ ಜನುಮದಿನದ ಪ್ರಯುಕ್ತ ಪ್ರತಾಪ್ ಸಿಂಹ ಅಭಿಮಾನಿಗಳು ಬಿಜೆಪಿ ಮುಖಂಡ ಆರ್ ಪರಮೇಶ್ ಗೌಡ ನೇತೃತ್ವದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.
ಪ್ರತಾಪ್ ಸಿಂಹ ಹೆಸರಿನಲ್ಲಿ ದಿವಾನ್ಸ್ ರಸ್ತೆಯಲ್ಲಿರುವ ಅಮೃತೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ನಂತರ ಸಿಹಿ ವಿತರಿಸಲಾಯಿತು.
ನಂತರ ಚಿಕ್ಕ ಗಡಿಯಾರದ ಮುಂಭಾಗ ಮಳೆಗಾಲದ ಹಿನ್ನೆಲೆಯಲ್ಲಿ ಪತ್ರಿಕಾ ವಿತರಕರಿಗೆ ರೈನ್ ಕೋಟ್ ವಿತರಿಸುವ ಮೂಲಕ ಅರ್ಥಪೂರ್ಣವಾಗಿ ಹುಟ್ಟು ಹಬ್ಬ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ಮುಖಂಡ ಆರ್ ಪರಮೇಶ್ ಗೌಡ ಮಾತನಾಡಿ,ಮಳೆಯಲ್ಲಿ ನೆನೆದು ಆರೋಗ್ಯ ಕೆಡಬಾರದು ಎಂಬ ಉದ್ದೇಶದಿಂದ ನಮ್ಮ ನಾಯಕ ಪ್ರತಾಪ್ ಸಿಂಹ ಅವರ ಹೆಸರಲ್ಲಿ ಪತ್ರಿಕೆ ವಿತರಕರಿಗೆ ರೈನ್ ಕೋಟ್ ನೀಡಿದ್ದೇವೆ ಎಂದು ಹೇಳಿದರು.
ಮುಂದಿನ ದಿನಗಳಲ್ಲಿ ತಾಯಿ ಚಾಮುಂಡೇಶ್ವರಿ ಪ್ರತಾಪ್ ಸಿಂಹ ಅವರು ವಿಧಾನ ಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದು ಬರುವಂತೆ ಆಶೀರ್ವದಿಸಲಿ ಎಂದು ಪ್ರಾರ್ಥಿಸಿದ್ದೇವೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷರಾದ
ಸಿ.ನಾರಯಾಣ ಗೌಡ, ಚೇತನ್, ಎಂ ಕೆ ಸುಂದರ್,ಟೆನಿಸ್ ಗೋಪಿ, ಸುರೇಂದ್ರ, ಬ್ರಹ್ಮಚಾರ್, ಗ್ಯಾರೇಜ್ ಶಿವಣ್ಣ, ಗಾಂಧಿ ನಗರ ವಿಜಿ,ಗೋಪಾಲ್, ಕಲ್ಕೆರೆ ನಾಗರಾಜ್, ಸಾಗರ್ ಶೆಟ್ಟಿ,ರವಿ ಕುಂಚಿಟಿಗ, ವಿನೋದ್ ಅರಸು,ಮೋಹನ, ಕೃಷ್ಣ ಮೂರ್ತಿ, ಮುಂತಾದವರು ಹಾಜರಿದ್ದರು.
