ಮೈಸೂರು: ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಆರ್ಎಸ್ಎಸ್ ಅನ್ನು ದೆವ್ವಕ್ಕೆ ಹೋಲಿಕೆ ಮಾಡಿರುವುದು ತಮ್ಮಹುದ್ದೆಗೆ ಸಮನಾಗಿ ಮಾತನಾಡುವ ಸಂಗತಿ ಅಲ್ಲ ಎಂದು ಬಿಜೆಪಿ ಮುಖಂಡರಾದ ಡಾ. ಹೇಮ ನಂದೀಶ್ ಹೇಳಿದ್ದಾರೆ.
ಪ್ರಿಯಾಂಕ್ ಅವರ ಚಿತ್ತಾಪುರ ಕ್ಷೇತ್ರ ದೇಶದಲ್ಲಿಯೇ ಅತಿ ಹಿಂದುಳಿದ ತಾಲ್ಲೂಕು ಎಂಬುದು ಜಗಜ್ಜಾಹೀರಾಗಿದೆ. ಈ ಬಗ್ಗೆ ಸ್ವಲ್ಪವೂ ಹಿಂಜರಿಕೆ ಇಲ್ಲದೆ ಆರ್ಎಸ್ಎಸ್ ಮತ್ತು ಬಿಜೆಪಿಯನ್ನು ಹೀಯಾಳಿಸುವುದು
ಶತ ಮೂರ್ಖತನ ,ನಿಮ್ಮ ತಂದೆಯ ಖ್ಯಾತಿ ಇಲ್ಲದಿದ್ದರೆ ಗ್ರಾಮ ಪಂಚಾಯತಿ ಸದಸ್ಯರಾಗಲು ಸಾದ್ಯಗುತ್ತಿರಲಿಲ್ಲ ಎಂದು ಹೇಮಾ ಪ್ರಕಟಣೆಯಲ್ಲಿ ಟೀಕಿಸಿದ್ದಾರೆ.
ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಮತ್ತು ಮಹಾತ್ಮ ಗಾಂಧಿ ಅವರು ಒಪ್ಪಿದ ಸಂಘದ ವ್ಯಕ್ತಿತ್ವದ ಹಿಂದೆ ಬಿದ್ದಿರುವುದು ನಕಲಿ ಗಾಂಧಿ ಕುಟುಂಬ ಮೆಚ್ಚಿಸಲು ಮಾತ್ರ. ಕಲ್ಯಾಣ ಕರ್ನಾಟಕ ಭಾಗದ ಜನರಿಗೆ ಕುಡಿಯಲು ಯೋಗ್ಯವಾದ ನೀರಿಲ್ಲ. ತಿರುಗಾಡಲು ಸರಿಯಾದ ರಸ್ತೆಯೂ ಇಲ್ಲ. ಐಟಿ/ಬಿಟಿಯ ಒಂದೇ ಒಂದು ಕಂಪನಿ ಇಲ್ಲಿ ಪ್ರಸಿದ್ಧಿ ಗಳಿಸಿಲ್ಲ. ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ದೆವ್ವವೂ ನೀವೆ, ಗ್ರಹಣವೂ ನೀವೆ ಎಂದು ಅವರು ಜರಿದಿದ್ದಾರೆ.
