ಪಿರಿಯಾಪಟ್ಟಣ: ತಾಲೂಕಿನ ಕೆಪಿಎಸ್ ಶಾಲೆಗಳಲ್ಲಿ ಆಂಗ್ಲ ಬಾಷ ಮಾಧ್ಯಮದಲ್ಲಿ ಕಲಿತ ಮಕ್ಕಳಿಗೆ 8ನೇ ತರಗತಿಯ ನಂತರ ಶಿಕ್ಷಕರ ಸಮಸ್ಯೆ ಕಾಡುತ್ತಿದೆ ಎಂದು ಕಾಯಕ ಸಮಾಜದ ಒಕ್ಕೂಟದವರು ಮಾಜಿ ಸಚಿವ ಎಚ್ ಸಿ ಮಾದೇವಪ್ಪ ನವರ ಬಳಿ ಸಮಸ್ಯೆ ತೋಡಿಕೊಂಡರು.
ಮಾಜಿ ಎಂಎಲ್ಸಿಗಳಾದ ಕೆ.ಸಿ ಪುಟ್ಟ ಸಿದ್ದಶೆಟ್ಟಿ ಮತ್ತು ಕಾಯಕ ಸಮಾಜದ ಒಕ್ಕೂಟದ ಪದಾಧಿಕಾರಿಗಳಾದ ಲೋಕೇಶ್ ಗಾಣಿಗ, ಸಮಾಜದ ರಮೇಶ್ ಮಾಕೋಡ್, ಬಸವರಾಜ್, ಕುಂಬಾರ ಸಮಾಜದ ಕೊಣಸೂರು ಶಿವರಾಜ್ ಕುಮಾರ್, ಮೋಹನ್, ವಿಶ್ವನಾಥ್, ನಂಜಪ್ಪ, ರಂಗಸ್ವಾಮಿ, ಉಮೇಶ್ ಮತ್ತಿತರರು ಮನವಿ ಪತ್ರ ಸಲ್ಲಿಸಿ ಕೆಪಿಎಸ್ ಎಂಟನೆ ತರಗತಿಗೆ ಶಿಕ್ಷಕರನ್ನು ಕೊಡಿಸಬೇಕೆಂದು ಕೋರಿದರು.
2018 ರಿಂದ ಆರಂಭವಾದ ಕರ್ನಾಟಕ ಪಬ್ಲಿಕ್ ಶಾಲೆಗಳಲ್ಲಿ ಆಂಗ್ಲ ಮಾಧ್ಯಮದಲ್ಲಿ ಕಲಿತ ಮಕ್ಕಳಿಗೆ ಎಂಟನೇ ತರಗತಿಗೆ ಹೋದಾಗ ಶಿಕ್ಷಕರೇ ಇಲ್ಲದಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಸುಮಾರು 30 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳ ಭವಿಷ್ಯ ಬೀದಿ ಪಾಲಾಗುವ ಸ್ಥಿತಿಯಲ್ಲಿದೆ, ಈಗಾಗಲೇ ಶಾಲೆಗಳು ಪ್ರಾರಂಭವಾಗಿದೆ, ಒಂದು ತಿಂಗಳಾದರೂ ಸಹಾ ಶಿಕ್ಷಕರ ಕೊರತೆ ನೀಗಿಲ್ಲ, ಆದುದರಿಂದ ಶಾಲೆಗೆ ಹೆಚ್ಚವರಿ ಶಿಕ್ಷಕರನ್ನು ನೇಮಿಸಿ ಸರಿಪಡಿಸಬೇಕೆಂದು ಕಾಯಕ ಸಮಾಜದ ಒಕ್ಕೂಟದವರು ಮಹದೇವಪ್ಪ ಅವರಲ್ಲಿ ಮನವಿ ಮಾಡಿದರು.
