ಮೈಸೂರು: 12ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಮೈಸೂರಿನ ಹೂಟಗಳ್ಳಿಯ ಓವೆಲ್ ಪಾರ್ಕ್ ನಲ್ಲಿ ಆಚರಿಸಲಾಯಿತು.
ಸುಮಾರು 2,000 ಜನ ಯೋಗಾಸನ ಮತ್ತು ಧ್ಯಾನವನ್ನು ಮಾಡಿ ಖುಷಿ ಪಟ್ಟರು.
ಇದೇ ವೇಳೆ ಆರೋಗ್ಯ ತಪಸಣಾ ಶಿಬಿರವನ್ನು ಮೈಸೂರಿನ ಹೆಸರಾಂತ ನಾರಾಯಣ ಹೃದಯಾಲಯ, ಕ್ಲಿಯರ್ ಮಿಡಿ ರೇಡಿಯಂಟ್, ಅನ್ನಪೂರ್ಣ ಕಣ್ಣಿನ ಆಸ್ಪತ್ರೆ, ಮತ್ತು ಸಿಪ್ಲ ಆಯುಷ್ ಇವರ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಲಾಗಿತ್ತು.
ಸುಮಾರು 600 ಮಂದಿ ಶಿಬಿರದ ಪ್ರಯೋಜನ ಪಡೆದುಕೊಂಡರು.
ಯೋಗ ನರಸಿಂಹ ಸ್ವಾಮಿ ದೇವಸ್ಥಾನದ ಕಾರ್ಯದರ್ಶಿ ಡಾ. ಪ್ರೊ. ಶ್ರೀನಿವಾಸ್ ಅವರು ಕಾರ್ಯಕ್ರಮ ಉದ್ಘಾಟನೆ ನೆರವೇರಿಸಿ,ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಬಗ್ಗೆ ತಿಳಿಸಿಕೊಟ್ಟರು.
ಕಾರ್ಯಕ್ರಮದಲ್ಲಿ ಇಂಡಸ್ಟ್ರಿಯಲ್ ಅಂಡ್ ಕಾಮರ್ಸ್ ಅಧ್ಯಕ್ಷರಾದಂತಹ ಲಿಂಗರಾಜ್ ಉಪಸ್ಥಿತರಿದ್ದರು.
ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಅಲೆಯನ್ಸ್ ಕ್ಲಬ್ ನ ರಾಜ್ಯಪಾಲರಾದ ಮಹಾಬಲೇಶ್ವರ ಭೈರಿ, ಅಂತರರಾಷ್ಟ್ರೀಯ ಅಲೆಯನ್ಸ್ ಕ್ಲಬ್ ನ ಕಾರ್ಯದರ್ಶಿ ಅಲೈ ಡಾ. ನಾಗರಾಜ್, ಅಂತರಾಷ್ಟ್ರೀಯ ಕಮಿಟಿ ಚೇರ್ಮನ್ ಅಲೈ ಸಿರಿಬಾಲು ನರವೇರಿಸಿದರು.
ಸಿರಿ ವಿದ್ಯಾಲಯ ಶಾಲೆಯ ಅಧ್ಯಕ್ಷರಾದ ಶೋಭಾ ಸಿರಿ ಬಾಲು, ಸುದರ್ಶನ ವಿದ್ಯಾ ಸಂಸ್ಥೆಯ ಪ್ರಾಶಂಪಲರಾದ ಸುರೇಶ್, ರೋಟರಿ ಮಿಡ್ ಟೌನ್ ಶಾಲೆಯ ಪ್ರಾಶಂಪಲರಾದ ಅನಂತರಾಮ್, ವಿದ್ಯಾ ಕಾನ್ವೆಂಟ್ ಶಾಲೆಯ ಶ್ರೀದೇವಿ, ಅಲೈಯನ್ಸ್ ಪ್ರಾಂತೀಯ ಅಧ್ಯಕ್ಷರಾದ ಮಹದೇವ್ ಡಿ. ಹಾಗೂ ಜಿಲ್ಲಾಧ್ಯಕ್ಷರಾದ ಡಾ.ರಾಜು. ಮೈಸೂರು ಜಿಲ್ಲಾ ಯೋಗ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಯೋಗ ಕುಮಾರ್ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಹಿರಿಯ ಯೋಗ ಪುಟಗಳಾದಂತಹ ಮಣಿಕಂಠನ್ ಹಾಗೂ ಲಂಕೇಶ್ ಅವರಿಗೆ ಅಂತರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ಗೌರವಿಸಿ ಸನ್ಮಾನಿಸಲಾಯಿತು.
