ಮೈಸೂರು: ಮೈಸೂರಿನ ಸಿದ್ದಾರ್ಥ ನಗರದ ಸ್ಕೇಟಿಂಗ್ ಪಾರ್ಕಿನಲ್ಲಿ ಜೆ ಎಸ್ ಎಸ್ ಪ್ರೌಢಶಾಲೆಯ ಮಕ್ಕಳು 12ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಶ್ರದ್ದೆಯಿಂದ ಆಚರಿಸಿದರು.
ಬೆಳಿಗ್ಗೆ ಶಾಲೆಯ ಮುಖ್ಯ ಶಿಕ್ಷಕಿ ಹೆಚ್.ವಿ. ಪುಷ್ಪಾ ಮತ್ತು ಸಹ ಶಿಕ್ಷಕರು ಹಾಗೂ ಕಚೇರಿ ಸಿಬ್ಬಂದಿಗಳ ಸಮ್ಮುಖದಲ್ಲಿ ದೈಹಿಕ ಶಿಕ್ಷಣ ಶಿಕ್ಷಕ ಎಸ್.ನಾಗೇಂದ್ರ ಅವರು ಯೋಗದ ಪ್ರಾಮುಖ್ಯತೆಯನ್ನು ತಿಳಿಸುತ್ತಾ ಮಕ್ಕಳಿಗೆ ಯೋಗಾಸನ ಮಾಡುವಂತೆ ಪ್ರೇರೇಪಿಸಿದರು.
ಸುಮಾರು ಅರ್ಧ ಗಂಟೆ ಕಾಲ ಶಾಲೆಯ ವಿದ್ಯಾರ್ಥಿಗಳಿಗೆ ನಾಗೇಂದ್ರ ಅವರು ವಿವಿಧ ಯೋಗ ಆಸನಗಳನ್ನು ಮಾಡಿಸುತ್ತಾ ಯಾವ ಯಾವ ಆಸನಗಳಿಂದ ಏನೇನು ಪ್ರಯೋಜನ ಸಿಗಲಿದೆ ಎಂಬುದನ್ನೂ ವಿವರಿಸಿದರು.
ಯೋಗ ಒಂದು ದಿನಕ್ಕೆ ಸೀಮಿತವಾಗದೆ ಪ್ರತಿದಿನ ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಶಾಲೆಯ ಶಿಕ್ಷಕರು ವಿದ್ಯಾರ್ಥಿಗಳಿಗೆ ತಿಳಿಹೇಳಿದರು.

