ಮೈಸೂರು: ಜಿಲ್ಲೆಯ ಎಚ್.ಡಿ.ಕೋಟೆ ಕಬಿನಿ ಹಿನ್ನೀರಿನಲ್ಲಿ ಹುಲಿಯೊಂದು ನೀರಿನಲ್ಲಿ ಕುಳಿತು ವಿಶ್ರಮಿಸುತ್ತಿರುವ ದೃಶ್ಯ ವೈರಲ್ ಆಗಿದ್ದು,ಪ್ರಾಣಿ ಪ್ರಿಯರು ಫುಲ್ ಖುಷ್.
ರಾಜ್ಯದಲ್ಲಿ ದಿನದಿಂದ ದಿನಕ್ಕೆ ಬಿಸಿಲಿನ ತಾಪಮಾನ ಏರಿಕೆಯಾಗುತ್ತಿದೆ,ಪ್ರಾಣಿ,ಪಕ್ಷಿಗಳು ಕೂಡ ನೀರಿನಲ್ಲಿ ಇಳಿದು ದೇಹವನ್ನು ತಂಪಾಗಿಸಿಕೊಳ್ಳುತ್ತಿವೆ.
ಕಬಿನಿ ಹಿನ್ನೀರಿನ ಪ್ರದೇಶದಲ್ಲಿ ಹುಲಿ ನೀರಿನಲ್ಲಿ ಮೈಚೆಲ್ಲಿ ವಿಶ್ರಮಿಸುತ್ತಿರುವ ದೃಶ್ಯವನ್ನು ಸಫಾರಿಗೆ ತೆರಳಿದ್ದ ಪ್ರವಾಸಿಗರೊಬ್ಬರು ತಮ್ಮ ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದಾರೆ.
ಈ ಫೋಟೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗಿದ್ದು,ಪ್ರಾಣಿ ಪ್ರಿಯರು ಸಕತ್ ಖುಷಿ ಪಟ್ಟಿದ್ದಾರೆ.
