ಮೈಸೂರು: ಮಂಗಳಮುಖಿ ಯೊಬ್ಬರು ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ಮೈಸೂರು ಜಿಲ್ಲೆ, ಪಿರಿಯಾಪಟ್ಟಣ ತಾಲೂಕಿನ ಬುದಿತಿಟ್ಟು ಕೆಸಗೆ ಗ್ರಾಮದಲ್ಲಿ ನಡೆದಿದೆ.
ಅಮೂಲ್ಯ (19) ಮೃತಪಟ್ಟ ಮಂಗಳಮುಖಿ.ಈಕೆಯ ಮೃತದೇಹ ಜಮೀನಿನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಅಮೂಲ್ಯಳ ಸಹೋದರರ ಕಿರುಕುಳದಿಂದ ಸಾವು ಸಂಭವಿಸಿದೆ ಎಂದು ಮಂಗಳಮುಖಿ ಸಮುದಾಯದವರು ಗಂಭೀರ ಆರೋಪ ಮಾಡಿದ್ದಾರೆ.
ಅಮೂಲ್ಯ ಸಾವಿನ ಬಗ್ಗೆ ಸೂಕ್ತ ತನಿಖೆ ನಡೆಸಬೇಕು ಎಂದು ಒತ್ತಾಯಿಸಿ ಮಂಗಳಮುಖಿಯರು ಪ್ರತಿಭಟನೆ ನಡೆಸಿ, ನ್ಯಾಯಕ್ಕಾಗಿ ಘೋಷಣೆಗಳನ್ನು ಕೂಗಿದರು.
ಸ್ಥಳಕ್ಕೆ ಪಿರಿಯಾಪಟ್ಟಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
