ಝೂ ಪ್ರಾಣಿಗಳಿಗೆ ತೊಂದರೆ; ವಾಟರ್ ಪಾರ್ಕ್ ತೆರವುಗೊಳಿಸಿ ತೇಜಸ್ವಿ ಆಗ್ರಹ
ಮೈಸೂರು: ವಾಟರ್ ಪಾರ್ಕ್ ನಿಂದ ಮೃಗಾಲಯದ ಪ್ರಾಣಿ ಪಕ್ಷಿಗಳಿಗೆ ತೊಂದರೆ ಉಂಟಾಗುವುದರಿಂದ ಕೂಡಲೇ ಇದನ್ನು ತೆರವುಗೊಳಿಸಬೇಕು ಎಂದು ಕನ್ನಡ ಕ್ರಾಂತಿದಳ ರಾಜ್ಯಾಧ್ಯಕ್ಷ ತೇಜಸ್ವಿ ನಾಗಲಿಂಗ ಸ್ವಾಮಿ ಜಿಲ್ಲಾಡಳಿತವನ್ನು ಆಗ್ರಹಿಸಿದ್ದಾರೆ.
ಮೈಸೂರು ಮೃಗಾಲಯಕ್ಕೆ ಕೇವಲ 100 ಮೀಟರ್ ದೂರದಲ್ಲಿ ಹೊಸದಾಗಿ ಈ ವಾಟರ್ ಪಾರ್ಕ್ ಆರಂಭವಾಗಿದೆ. ಇದು ತೀರ ಹತ್ತಿರದಲ್ಲಿ ಇರುವುದರಿಂದ ಪ್ರಾಣಿ ಪಕ್ಷಿಗಳ ಮೇಲೆ ತೀವ್ರವಾದ ತೊಂದರೆ ಉಂಟಾಗುತ್ತದೆ ಆದ ಕಾರಣ ಇದನ್ನು ನಿಷೇಧಿಸುವಂತೆ ಒತ್ತಾಯಿಸಿದ್ದಾರೆ
ವನ್ಯಜೀವಿ ಸಂರಕ್ಷಣಾ ಕಾಯ್ದೆ ಮತ್ತು ಸೆಂಟ್ರಲ್ ಝೂ ಅಥಾರಿಟಿ ನಿಯಮಗಳ ಪ್ರಕಾರ, ಮೃಗಾಲಯದ ಸುತ್ತಮುತ್ತಲಿನ ಪರಿಸರ ಸೂಕ್ಷ್ಮ ವಲಯಗಳಲ್ಲಿ (Eco-sensitive zones) ಪ್ರಾಣಿಗಳಿಗೆ ತೊಂದರೆ ಆಗುವಂತಹ ಅತಿಯಾದ ಧ್ವನಿವರ್ಧಕಗಳ ಬಳಕೆ ಅಥವಾ ಮಿತಿಮೀರಿದ ಶಬ್ದ ಮಾಡುವಂತಿಲ್ಲ. ಆದ್ದರಿಂದ ವಾಟರ್ ಪಾರ್ಕ್ ಅನ್ನು ತೆರವು ಗೊಳಿಸಬೇಕು ಎಂದಿದ್ದಾರೆ
ಮೈಸೂರು ಮೃಗಾಲಯದ ಆಡಳಿತ ಮಂಡಳಿಯು ಪ್ರಾಣಿಗಳ ಆರೋಗ್ಯ ಮತ್ತು ಮಾನಸಿಕ ನೆಮ್ಮದಿಯ ಮೇಲೆ ಸದಾ ನಿಗಾ ಇಟ್ಟಿರಬೇಕು ಒಂದು ವೇಳೆ ವಾಟರ್ ಪಾರ್ಕ್ನ ಸೌಂಡ್ ಸಿಸ್ಟಮ್ ಅಥವಾ ಲೌಡ್ ಮ್ಯೂಸಿಕ್ನಿಂದ ಪ್ರಾಣಿಗಳಿಗೆ ಒತ್ತಡ ಉಂಟಾಗುವುದು ಕಂಡುಬಂದರೆ, ತಕ್ಷಣವೇ ಕಾನೂನು ಕ್ರಮ ಜರುಗಿಸುವ ಅಧಿಕಾರ ಮೃಗಾಲಯದ ಮಂಡಳಿಗೆ ಇರುತ್ತದೆ.
ಆದರೆ ಮೃಗಾಲಯ ಪ್ರಾಧಿಕಾರದವರು ಈ ಕುರಿತು ಮೌನ ವಹಿಸಿರುವುದು ಸಂಶಯಕ್ಕೆ ಕಾರಣವಾಗಿದೆ ಎಂದು ತೇಜಸ್ವಿ ಆರೋಪಿಸಿದ್ದಾರೆ
ಜಿಲ್ಲಾಡಳಿತ ಕೂಡಲೇ ವಾಟರ್ ಪಾರ್ಕ್ ತೆರವು ಮಾಡಬೇಕು ಈ ಕುರಿತು ಸಂಬಂಧಿಸಿದ ಇಲಾಖೆಗಳಿಗೆ ದೂರು ನೀಡುವುದಾಗಿ ಕನ್ನಡ ಕ್ರಾಂತಿದಳ ರಾಜ್ಯಾಧ್ಯಕ್ಷ ತೇಜಸ್ವಿ ನಾಗಲಿಂಗ ಸ್ವಾಮಿ ತಿಳಿಸಿದ್ದಾರೆ,
