ಮೈಸೂರು: 51 ಕೆಜಿ ಗಾಂಜಾ ಮಾರಾಟ ಪ್ರಕರಣದಲ್ಲಿ ಮೂವರು ಆರೋಪಿಗಳಿಗೆ 5 ವರ್ಷ ಕಠಿಣ ಶಿಕ್ಷೆ ಮತ್ತು ತಲಾ 25 ಸಾವಿರ ರೂ. ದಂಡ ವಿಧಿಸಿ 7ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ.
2023 ಜುಲೈ 26 ರಂದು ರಾಜೇಂದ್ರನಗರ ಮುಖ್ಯ ರಸ್ತೆಯಲ್ಲಿ ಕೆಎ 01 ಬಿ 5525 ಆಟೋದಲ್ಲಿ 5 ಕೆಜಿ ಗಾಂಜಾ ಸಾಗಿಸುತ್ತಿದ್ದ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದರು.
ನಂತರ ಪ್ರಮುಖ ಆರೋಪಿ ವಸೀಂ ಪಾಷಾ ಮನೆಯಲ್ಲಿ ಸಂಗ್ರಹಿಸಿದ್ದ 45 ಕೆಜಿ ಸೇರಿ ಒಟ್ಟು 51 ಕೆಜಿ 420 ಗ್ರಾಂ ಗಾಂಜಾ ವಶಪಡಿಸಿಕೊಳ್ಳಲಾಗಿತ್ತು.
ವಿಚಾರಣೆ ನಡೆಸಿದ ನ್ಯಾಯಾಧೀಶ ದಯಾನಂದ ವಿ.ಹೆಚ್. ಅವರು NDPS ಕಾಯ್ದೆಯಡಿ ತೀರ್ಪು ಪ್ರಕಟಿಸಿದ್ದು, ದಂಡ ಕಟ್ಟದಿದ್ದರೆ 6 ತಿಂಗಳು ಹೆಚ್ಚುವರಿ ಜೈಲು ಅನುಭವಿಸಬೇಕೆಂದು ಆದೇಶಿಸಿದ್ದಾರೆ.
ಸರ್ಕಾರದ ಪರವಾಗಿ ಅಭಿಯೋಜಕಿ ಎನ್.ಬಿ. ವಿಜಯಲಕ್ಷ್ಮಿ ವಾದ ಮಂಡಿಸಿದ್ದರು.
