ಮೈಸೂರು: ಲವ್ ಜಿಹಾದ್ ಕುರಿತಂತೆ ತೆರೆ ಕಂಡಿರುವ ‘ದಿ ಕೇರಳ ಸ್ಟೋರಿ 2’ ಸಿನಿಮಾ ವನ್ನು ಮೈಸೂರಿನ ಜಯಲಕ್ಷ್ಮಿಪುರಂ ನಲ್ಲಿರುವ ಡಿ ಆರ್ ಸಿ ಯಲ್ಲಿ ವಿದ್ಯಾರ್ಥಿನಿಯರಿಗೆ ಹಾಗೂ ಮಹಿಳೆಯರಿಗೆ ಉಚಿತ ಪ್ರದರ್ಶನಕ್ಕೆ ಅವಕಾಶ ಮಾಲಾಗಿದೆ.
ವಿಷನ್ ಟೀಮ್ ಆಫ್ ಮೈಸೂರು ವತಿಯಿಂದ ಈ ಅವಕಾಶ ಕಲ್ಪಿಸಲಾಗಿದ್ದು,
ಇದಕ್ಕೆ ಬಿಜೆಪಿ-ಹಿಂದು ಮುಖಂಡರು ಸಾಥ್ ಕೊಟ್ಟಿದ್ದಾರೆ. ಇದಕ್ಕೆ ಎಲ್ಲ ಕಡೆಗಳಿಂದ ಮೆಚ್ಚುಗೆ ಸಿಕ್ಕಿದೆ.
ಚಿತ್ರ ಪ್ರದರ್ಶನಕ್ಕೆ ಚಾಲನೆ ನೀಡಿದ ನಂತರ ಮಾತನಾಡಿದ ಡಾಕ್ಟರ್ ಹೇಮಾನಂದೀಶ್ ಅವರು,
ಪ್ರತಿಯೊಬ್ಬ ಹಿಂದು ಯುವತಿಯರು ನೋಡಲೇಬೇಕಾದ ಚಿತ್ರ ಇದು ಎಂದು ಹೇಳಿದರು.
ಕರ್ನಾಟಕದಲ್ಲಿ ಪ್ರತಿ ಕ್ಷೇತ್ರದಲ್ಲೂ ಜಾಗೃತಿ ಆಗಬೇಕಿದೆ, ಎಲ್ಲಾ ಜಿಲ್ಲೆಯ ಹಿಂದು ನಾಯಕರು ನಮ್ಮ ಹೆಣ್ಣು ಮಕ್ಕಳ ರಕ್ಷಣೆಗಾಗಿ ದಿ ಕೇರಳ ಸ್ಟೋರಿ 2’
ಉಚಿತ ಪ್ರದರ್ಶನಕ್ಕೆ ಮುಂದಾಗಲಿ ಎಂದು ಸಲಹೆ ನೀಡಿದರು.
ನಮ್ಮ ವಿಷನ್ ಟೀಮ್ ಆಫ್ ಮೈಸೂರು
ತಂಡದ ವತಿಯಿಂದ 15 ದಿನಗಳು ಜಯ ಲಕ್ಷ್ಮಿಪುರಂನಲ್ಲಿರುವ ಡಿ ಆರ್ ಸಿ ಮಾಲ್ ನಲ್ಲಿ 10,000ಕ್ಕೂ ಹೆಚ್ಚು ಯುವತಿಯರು ಹಾಗೂ ಮಹಿಳೆಯರಿಗೆ ಈ ಚಿತ್ರದ ಉಚಿತ ಪ್ರದರ್ಶನ ನೀಡಲಾಗುವುದು ಎಂದು ಹೇಳಿದರು.
ಉಚಿತ ಟಿಕೆಟ್ ಹಾಗೂ
ಹೆಚ್ಚಿನ ಮಾಹಿತಿಗಾಗಿ 99865 54557,9740685611 ಸಂಪರ್ಕಿಸಬಹುದು.
ಈ ಸಂದರ್ಭದಲ್ಲಿ ರೇವತಿ ಕೃಷ್ಣಪ್ಪ, ಪೂರ್ಣಿಮಾ ಹಾಗೂ ಟೀಮ್ ನ ಎಲ್ಲಾ ಸದಸ್ಯರು ಹಾಜರಿದ್ದರು.

