ಮೈಸೂರು: ಕೆ ಎಂ ಪಿ ಕೆ ಚಾರಿಟೇಬಲ್ ಟ್ರಸ್ಟ್ನ ಸಂಸ್ಥಾಪಕ ಅಧ್ಯಕ್ಷರು ಹಾಗೂ ಮೈಸೂರು ಪೇಂಟ್ಸ್ ಅಂಡ್ ವಾರ್ನಿಷ್ ಲಿಮಿಟೆಡ್ನ ನಿವೃತ್ತ ನೌಕರರಾದ, ಕೆ.ಆರ್. ಮೊಹಲ್ಲಾ ನಿವಾಸಿ ಕೆ. ಎಸ್. ಮುರಳೀಧರ್ ಅವರು ನಿಧನರಾಗಿದ್ದಾರೆ.
ಅವರು ಪತ್ನಿ ಸೇರಿದಂತೆ ಅಪಾರ ಬಂಧು-ಬಳಗ ಹಾಗೂ ಸ್ನೇಹಿತರನ್ನು ಅಗಲಿದ್ದಾರೆ.
ಕೆ. ಎಸ್. ಮುರಳೀಧರ್ ಅವರ ಅಂತ್ಯಕ್ರಿಯೆಯು ಚಾಮುಂಡಿ ಬೆಟ್ಟದ ತಳಭಾಗದಲ್ಲಿರುವ ಸುಡುವ ಸ್ಮಶಾನದಲ್ಲಿ ನೆರವೇರಿತು ಎಂದು ಕೆ ಎಮ್ ಪಿ ಕೆ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ವಿಕ್ರಂ ಅಯ್ಯಂಗಾರ್ ತಿಳಿಸಿದ್ದಾರೆ.
