ಮೈಸೂರು: ಚಾಮುಂಡೇಶ್ವರಿ ಯುವ ಬಳಗದ ವತಿಯಿಂದ ಉಪ್ಪಿನ ಸತ್ಯಾಗ್ರಹ ಸ್ಮರಣೆ ಮಾಡಲಾಯಿತು.
ನಾರಾಯಣ ಶಾಸ್ತ್ರಿ ರಸ್ತೆಯಲ್ಲಿರುವ ಸ್ವಾತಂತ್ರ್ಯ ಹೋರಾಟಗಾರರ ಉದ್ಯಾನವನದಲ್ಲಿ ಚಾಮುಂಡೇಶ್ವರಿ ಯುವ ಬಳಗದ ವತಿಯಿಂದ ಮಹಾತ್ಮ ಗಾಂಧಿ ಪ್ರತಿಮೆಗೆ ಮಾಲಾಪಣೆ ಮಾಡಲಾಯಿತು.
1930 ರಲ್ಲಿ ಮಹಾತ್ಮ ಗಾಂಧಿ ಅವರು ಬ್ರಿಟಿಷರ ಉಪ್ಪು ತೆರಿಗೆ ವಿರೋಧಿಸಿ ದಂಡಿ ಮಾರ್ಚ್ (ಉಪ್ಪು ಸತ್ಯಾಗ್ರಹ) ಆರಂಭಿಸಿದ ದಿನವನ್ನು ಸ್ಮರಿಸಿದರು.
ಈ ಘಟನೆ ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಮಹತ್ವದ ತಿರುವು ತಂದಿತ್ತೆಂದು ಈ ವೇಳೆ ನಾಯಕರು ತಿಳಿಸಿದರು.
ಈ ಸಂದರ್ಭದಲ್ಲಿ ಕೆಪಿಸಿಸಿ ಸದಸ್ಯರಾದ ನಜರ್ಬಾದ್ ನಟರಾಜ್,ರಮೇಶ್ ರಾಮಪ್ಪ,
ಶ್ರೀ ಕನಕ ಪತ್ತಿನ ಸಹಕಾರಿ ಸಂಘದ ನಿರ್ದೇಶಕ ರವಿಚಂದ್ರ,ಡೈರಿ ವೆಂಕಟೇಶ್,
ಕಡಕೋಳ ಶಿವು, ಎಸ್ ಎನ್ ರಾಜೇಶ್,ಉಮೇಶ್ ,ರಾಕೇಶ್,ರಾಮಚಂದ್ರ
ಸುಚೇಂದ್ರ ರಾಜು ,ನಿತಿನ್ ,ಗುರು ಮತ್ತಿತರರು ಹಾಜರಿದ್ದರು.
