ಮೈಸೂರು: ಒಡನಾಡಿ ಸೇವಾ ಸಂಸ್ಥೆ ವತಿಯಿಂದ 18ನೇ ಅಂತರರಾಷ್ಟ್ರೀಯ ಯೋಗ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಸಂಸ್ಥೆಯ ನಿರ್ದೇಶಕ ಸ್ಟಾನ್ಲಿ ಅವರು ತಿಳಿಸಿದರು.
ಮೈಸೂರು ಜಿಲ್ಲಾ ಪತ್ರಕರ್ತರ ಸಂಘದಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಈ ಕುರಿತು ಮಾತನಾಡಿದರು.
ಮಾನವೀಯತೆಯ ಸಾಧನವನ್ನಾಗಿ ಬಳಸಿ ಮಾನವ ಸಾಗಾಣಿಕೆ ಹಾಗೂ ಲೈಂಗಿಕ ಶೋಷಣೆಯ ವಿರುದ್ಧ ಎಲ್ಲಾ ದೇಶಗಳ ಸಂಸ್ಕೃತಿ ಹಾಗೂ ಗಡಿಗಳನ್ನು ದಾಟಿ ಒಂದು ಆಂದೋಲವನ್ನು ರೂಪಿಸಲು ಒಡನಾಡಿ ಯೋಗ ಸ್ಟಾಪ್ಸ್ ಟ್ರಾಫಿಕ್ ಎಂಬ ಕಾರ್ಯಕ್ರಮವನ್ನು ಆಯೋಜಿಸಿದೆ ಎಂದು ಅವರು ತಿಳಿಸಿದರು.
ಮಾನವೀಯತೆಯ ಸಮಾನತೆಗಾಗಿ ಒಂದು ದಿನ ಒಂದು ದ್ವನಿ ಎಂಬ ಆಶಯದೊಡನೆ ವಿಶ್ವದಾದ್ಯಂತ ಒಂದು ಧ್ವನಿಯನ್ನು ಹೊರಡಿಸಲು ಯೋಗವನ್ನು ಒಡನಾಡಿಯು ಮಾಧ್ಯಮ ಸಾಧನವನ್ನಾಗಿಸಿ ಕೊಂಡಿದೆ ಎಂದು ಸ್ಟಾನ್ಲಿ ಹೇಳಿದರು.
ಭಾರತ, ಇಂಗ್ಲೆಂಡ್, ಅಮೆರಿಕ, ಆಸ್ಟ್ರೇಲಿಯಾ, ಹಾಲೆಂಡ್, ಮೆಕ್ಸಿಕೋ, ಸ್ವೀಡನ್, ಸೇರಿದಂತೆ 40ಕ್ಕೂ ಹೆಚ್ಚು ದೇಶಗಳ ಜನತೆ ಏಕಕಾಲದಲ್ಲಿ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ವಿವರಿಸಿದರು.
ಮಾರ್ಚ್ 14 ರಂದು ಬೆಳಿಗ್ಗೆ 7.30 ಕ್ಕೆ ಮೈಸೂರು ಅರಮನೆ ಮುಂಭಾಗದಲ್ಲಿ ಈ ಯೋಗ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌದರಿ, ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಮಹದೇವಪ್ಪ ಮತ್ತು ಬುಡಕಟ್ಟು ಬಾಲಕಿ ಲಲಿತ ಅವರು ಭಾಗವಹಿಸಲಿದ್ದಾರೆ ಎಂದು ಸ್ಟಾನ್ಲಿ ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಒಡನಾಡಿ ಸಂಸ್ಥೆಯ ನಿರ್ದೇಶಕ ಪರಶು, ಪ್ರೊ.ಲಲಿತ ಬಿದ್ದಪ್ಪ ಹಾಗೂ ಡಾ.ಮೂರ್ತಿ ಉಪಸ್ಥಿತರಿದ್ದರು.
