ಪಿರಿಯಾಪಟ್ಟಣ: ಪಿರಿಯಾಪಟ್ಟಣ ತಾಲೂಕು ದಿಂಡಗಾಡು ಗ್ರಾಮ ರೈತ ಸಂಘ ಮತ್ತು ಹಸಿರು ಸೇನೆ ವತಿಯಿಂದ ಸಾಲು ದೀಕ್ಷೆ ಮತ್ತು ರೈತ ಘಟಕ ಉದ್ಘಾಟನಾ ಸಮಾರಂಭ ಹಮ್ಮಿಕೊಳ್ಳಲಾಯಿತು.
ರಾಜ್ಯಾಧ್ಯಕ್ಷರಾದ ಆರ್ ಮಂಜುನಾಥ್ ಗೌಡ ಅವರು ದೀಪ ಹಚ್ಚುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.
ಈ ವೇಳೆ ಮಾತನಾಡಿದ ಅವರು ರಾಜ್ಯ ಮತ್ತು ತಾಲೂಕಿನಲ್ಲಿ ರೈತ ಸಂಘಗಳು ಹೆಚ್ಚಾಗಬೇಕಾಗಿದೆ, ಸಂಘಗಳನ್ನು ಹೆಚ್ಚು ಬೆಳೆಸಬೇಕು ಎಂದು ಹೇಳಿದರು.
ನಂತರ ರಾಜ್ಯ ಯುವ ಘಟಕದ ತಾಲೂಕು ಅಧ್ಯಕ್ಷರಾದ ಪಿ.ಎಂ ಮಹಾದೇವ ಅವರು ಮಾತನಾಡಿ ನಮ್ಮ ತಾಲೂಕಿನ ರೈತರು ಸರ್ಕಾರದಿಂದ ದೊರೆಯುವ ರಸಗೊಬ್ಬರ ಮತ್ತು ಬೀಜಗಳನ್ನು ಸದುಪಯೋಗ ಪಡಿಸಿಕೊಂಡು ಉಳಿಮೆ ಮಾಡುತ್ತಿದ್ದು ಅವರು ಈಗ ಬರಗಾಲದಿಂದ ಸಂಕಟದಲ್ಲಿದ್ದಾರೆ ಎಂದು ತಿಳಿಸಿದರು.
ಸರ್ಕಾರದ ಪರಿಹಾರಕ್ಕೋಸ್ಕರ ಕಾದು ಕುಳಿತಿದ್ದಾರೆ,ಸರ್ಕಾರ ಇತ್ತ ಗಮನ ಹರಿಸಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಯುವ ಘಟಕದ ರಾಜ್ಯಾಧ್ಯಕ್ಷರಾದ ಸೋಮೇಗೌಡ್ರು, ರಾಜ್ಯ ಸದಸ್ಯರಾದ ದೇವಶೆಟ್ಟರು, ತಾಲೂಕು ಸಂಚಾಲಕರಾದ ಕೊಣಸೂರು ಶಿವರಾಜು, ಉಪಾಧ್ಯಕ್ಷರಾದ ಬಿಲ್ಲಹಳ್ಳಿ ಸುರೇಶ್, ಕಾರ್ಯದರ್ಶಿಗಳಾದ ಬೆಟ್ಟದಪುರ ಯೋಗಣ್ಣ, ಜಿಂದಗಾಡು ಗ್ರಾಮದ ದಯಾನಂದ, ಕುಮಾರ್, ಮಾದೇವ ಮತ್ತಿತರರು ಹಾಜರಿದ್ದರು.
