ಮೈಸೂರು: ಎಸ್ ಐಆರ್ ಪ್ರಕ್ರಿಯೆ ಮಾಡುತ್ತಿರುವುದು ಕೇಂದ್ರ ಸರ್ಕಾರ. ಅವರು ಪ್ರತಿಯೊಂದನ್ನೂ ಸೂಪರ್ ವೈಸ್ ಮಾಡುತ್ತಾರೆ,ರಾಜಕೀಯ ಪ್ರೇರಿತ ದೂರುಗಳಿಗೆ ರಾಜ್ಯ ಚುನಾವಣಾ ಆಯೋಗ ಬೆಲೆ ಕೊಡುವುದಿಲ್ಲ ಎಂದು ಸಚಿವ ಡಾ.ಯತೀಂದ್ರ ತಿರುಗೇಟು ನೀಡಿದರು
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಸ್ ಐಆರ್ ಪ್ರಕ್ರಿಯೆ ಮಾಡುತ್ತಿರುವುದು ಕೇಂದ್ರ ಸರ್ಕಾರ. ಅವರು ಪ್ರತಿಯೊಂದನ್ನೂ ಸೂಪರ್ ವೈಸ್ ಮಾಡುತ್ತಾರೆ. ಆದರೂ ಸುಮ್ಮನೆ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಜೆಡಿಎಸ್ ನಾಯಕರು ಟೀಕೆ ಮಾಡುತ್ತಿದ್ದಾರೆ. ರಾಜಕೀಯ ಪ್ರೇರಿತ ದೂರುಗಳಿಗೆ ರಾಜ್ಯ ಚುನಾವಣಾ ಆಯೋಗ ಬೆಲೆ ಕೊಡುವುದಿಲ್ಲ ಎಂದು ಹೇಳಿದರು.
ನಗರಾಭಿವೃದ್ಧಿ ಸಚಿವ ಸ್ಥಾನದಿಂದ ಯತೀಂದ್ರ ಸಿದ್ದರಾಮಯ್ಯ ಅವರನ್ನು ಕೈ ಬಿಡಬೇಕೆಂದು ಸಿಎಂಗೆ ಪತ್ರ ನೀಡಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಈಗಾಗಲೇ ಈ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದೇನೆ. ಮುಡಾ ಕೇಸ್ ಲೋಕಾಯುಕ್ತರಿಂದ ಸಂಪೂರ್ಣ ತನಿಖೆಯಾಗಿದೆ. ತನಿಖೆ ವರದಿ ಕೂಡ ಸಲ್ಲಿಸಲಾಗಿದೆ. ಜನಪ್ರತಿನಿಧಿಗಳ ನ್ಯಾಯಾಲಯ ಕೂಡಾ ಇದನ್ನು ಒಪ್ಪಿದೆ. ಹೀಗಿದ್ದರೂ ಹೈಯರ್ ಅಪೀಲ್ ಗೆ ಹೋಗಿದ್ದಾರೆ. ತನಿಖೆ ಪೂರ್ಣಗೊಂಡಿರುವುದರಿಂದ ನಾವು ಪ್ರಭಾವ ಬೀರಲು ಸಾಧ್ಯವಿಲ್ಲ. ಕೆಲವರು ಮಾಡುತ್ತಿರುವ ಆರೋಪ ಸತ್ಯಕ್ಕೆ ದೂರವಾದದ್ದು ಎಂದು ಹೇಳಿದರು.
ಪಕ್ಷದಲ್ಲಿ ಸಿದ್ದರಾಮಯ್ಯ ಅವರನ್ನು ಕಡೆಗಣಿಸಲಾಗುತ್ತಿದೆಯೆ ಎಂಬ ಪ್ರಶ್ನೆಗೆ, ಅವರನ್ನು ಕಡೆಗಣಿಸುವ ಪ್ರಶ್ನೆಯೇ ಇಲ್ಲ. ಬ್ಯಾನರ್ ಹಾಕಿಲ್ಲ, ಪೋಸ್ಟರ್ ಹಾಕಿಲ್ಲ ಎಂಬ ವಿಚಾರಕ್ಕೆ ನಮ್ಮ ತಂದೆ ತಲೆ ಕೆಡಿಸಿಕೊಳ್ಳುವವರಲ್ಲ ಎಂದು ಯತೀಂದ್ರ ತಿಳಿಸಿದರು.
