ಮೈಸೂರು: ಯುನೈಟೆಡ್ ರಿಲಿಜಿಯನ್ಸ್ ಇನಿಶಿಯೇಟಿವ್ ಜಾಗತಿಕ ಮಂಡಳಿಯ ಟ್ರಸ್ಟಿ ಯಾಗಿ ಮೈಸೂರಿನ ಕ್ರೆಡಿಟ್ – ಐ ಸಂಸ್ಥೆಯ ಸಂಸ್ಥಾಪಕರೂ, ರೋಟರಿ ಕ್ಲಬ್ ಆಫ್ ಸೇವಾ ಮೈಸೂರು ಅಧ್ಯಕ್ಷ ಡಾ. ಎಂ ಪಿ ವರ್ಷ ಅವರು ಆಯ್ಕೆಯಾಗಿದ್ದಾರೆ.
ಈ ಹಿನ್ನೆಲೆಯಲ್ಲಿ ರೋಟರಿ ಕ್ಲಬ್ ಆಫ್ ಸೇವಾ ವತಿಯಿಂದ ಗೌರಿಶಂಕರನಗರದಲ್ಲಿರುವ ಕಚೇರಿಯಲ್ಲಿ ಎಂ ಪಿ ವರ್ಷ ರವರಿಗೆ ಅಭಿನಂದನೆ ಸಲ್ಲಿಸಲಾಯಿತು
ಏಷಿಯಾ ಖಂಡದಿಂದ ಯುಆರ್ ಐ ನ ಜಾಗತಿಕ ಮಂಡಳಿಯ ಟ್ರಸ್ಟಿಗಳ ಆಯ್ಕೆಗಾಗಿ ಕಳೆದ ತಿಂಗಳು ಚುನಾವಣೆ ನಡೆದಿದ್ದು, ನೆನ್ನೆ ಪ್ರಕಟವಾದ ಫಲಿತಾಂಶದ ಪ್ರಕಾರ ಚುನಾವಣೆಯಲ್ಲಿ ಸ್ಪರ್ಧಿಸಿದ್ದ 12 ಅಭ್ಯರ್ಥಿಗಳ ಪೈಕಿ ಡಾ. ಎಂ ಪಿ ವರ್ಷ ಅವರು ಅತ್ಯಧಿಕ ಮತಗಳನ್ನು ಪಡೆದು ಜಯ ಸಾಧಿಸಿ ದ್ದಾರೆ.
ಭಾರತ, ಪಾಕಿಸ್ತಾನ, ಶ್ರೀಲಂಕಾ, ಬಾಂಗ್ಲಾದೇಶ, ನೇಪಾಳ, ಜಪಾನ್ ಸೇರಿದಂತೆ ಅನೇಕ ದೇಶಗಳ ಮತದಾರರು ಮತ ಚಲಾವಣೆ ಮಾಡಿದ್ದಾರೆ.
ಯುಆರ್ ಐ ಅಮೆರಿಕದ ಸ್ಯಾನ್ ಫ್ರಾನಿಸ್ಕೋದಲ್ಲಿ ಕೇಂದ್ರ ಕಚೇರಿಯನ್ನು ಹೊಂದಿದೆ,ಸೆಪ್ಟೆಂಬರ್ ನಲ್ಲಿ ನಡೆಯುವ ಪದವಿಗ್ರಹಣ ಸಮಾರಂಭದಲ್ಲಿ ಮುಂದಿನ 4 ವರ್ಷಗಳಿಗೆ ಜಾಗತಿಕ ಮಂಡಳಿಯ ಟ್ರಸ್ಟಿ ಯಾಗಿ ಡಾ. ಎಂ ಪಿ ವರ್ಷ ಅಧಿಕಾರ ವಹಿಸಿಕೊಳ್ಳಲಿದ್ದಾರೆ
ರೋಟರಿ ಕ್ಲಬ್ ಆಫ್ ಸೇವಾ ದ ಉಪಾಧ್ಯಕ್ಷರಾದ ಸಿ.ಜಿ ಮುತ್ತಣ್ಣ, ಕಾರ್ಯದರ್ಶಿ ಗೌರಿಶಂಕರಸ್ವಾಮಿ, ಯೂಥ್ ಡೈರೆಕ್ಟರ್ ಪ್ರೊ ಮನೋನ್ಮಣಿ ಎಂ ಎಸ್, ರೆಡ್ ಕ್ರಾಸ್ ನ ಪ್ರೊ ಎಂ ಮಹದೇವಪ್ಪ ಹಾಗೂ ಕ್ರೆಡಿಟ್ – ಐ ಸಂಸ್ಥೆಯ ಎಕ್ಸಿಕ್ಯುಟಿವ್ ಆಫೀಸರ್ ರಚನಾ ವರ್ಷ, ಸಿಬ್ಬಂದಿಗಳಾದ ಪೂರ್ಣಿಮ, ಅಶೋಕ್ ಅವರುಗಳು ಜಾಗತಿಕ ಮಂಡಳಿಯ ಟ್ರಸ್ಟಿ ಯಾಗಿ ಆಯ್ಕೆಯಾಗಿರುವ ರೋಟರಿಯನ್ ಡಾ ಎಂ ಪಿ ವರ್ಷ ಸವರನ್ನು ಸನ್ಮಾನಿಸಿದರು.
