ಮೈಸೂರು: ಚಾಮುಂಡಿಪುರಂನ ಬಸವ ಬಳಗ ಸಂಘದ ವತಿಯಿಂದ ಶ್ರೀ ಚಾಮುಂಡೇಶ್ವರಿ ಅಮ್ಮನವರ ವರ್ಧಂತಿ (ಜನ್ಮೋತ್ಸವ) ಮಹೋತ್ಸವವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಯಿತು.
ಚಾಮುಂಡಿಪುರಂ ವೃತ್ತದಲ್ಲಿ ಶ್ರೀ ಚಾಮುಂಡೇಶ್ವರಿ ದೇವಿಯ ವಿಗ್ರಹಕ್ಕೆ ವಿಶೇಷ ಪೂಜೆ ಸಲ್ಲಿಸಿ, ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಪೂಜಾ ಕಾರ್ಯಕ್ರಮದ ನಂತರ ನೂರಾರು ಭಕ್ತರಿಗೆ ಪ್ರಸಾದ ವಿನಿಯೋಗ ಮಾಡಲಾಯಿತು.
ಈ ಸಂದರ್ಭದಲ್ಲಿ ಬಸವ ಬಳಗ ಸಂಘದ ಅಧ್ಯಕ್ಷ ಸಂದೀಪ್ ಸಿ., ಗೌರವಾಧ್ಯಕ್ಷ ಅಂಬಳೆ ಶಿವಣ್ಣ, ಉಪಾಧ್ಯಕ್ಷ ಎಂ. ಬಸವರಾಜು, ಕೆ.ಆರ್. ಬ್ಯಾಂಕ್ ನಿರ್ದೇಶಕ ಬಸವರಾಜ್ ಬಸಪ್ಪ, ಪ್ರಮುಖರಾದ ಮರಿಸ್ವಾಮಿ, ಮಹೇಶ್ ಅರಸ್, ಜೋಗಿ ಮಂಜು, ಗಣೇಶ, ವಿಕ್ರಮ್ ಐಯ್ಯಂಗಾರ್, ಅಡುಗೆ ಕಾಂಟ್ರಾಕ್ಟರ್ ಕುಮಾರ್, ಬಸವರಾಜು, ಪ್ರಭು, ಪಾನಿಪುರಿ ಚಿಕ್ಕಣ್ಣ, ಚುರುಮುರಿ ರಾಜು, ಗೋಪಾಲ್ ಅರಸ್, ಪುರುಷೋತ್ತಮ್, ವಸಂತ್, ರವೀಂದ್ರ, ಭಾನುಕುಮಾರ್, ಆನಂದ್, ಶಂಕರ್, ಶೇಖರ್, ನಾಗೇಂದ್ರ, ದಿವಾಕರ್, ನರೇಂದ್ರ ರಾವ್, ಮಂಜುಳಾ, ವಿಜಯಾ, ದೇವೇಂದ್ರ ಸ್ವಾಮಿ, ದೀಪಕ್, ಸಂದೇಶ್, ಅಜ್ಗರ್, ವಿನಯ್ ಸೇರಿದಂತೆ ಹಲವು ಮಂದಿ ಪಾಲ್ಗೊಂಡಿದ್ದರು.
