ಮೈಸೂರು: ಮೈಸೂರಿನ ಜಯನಗರ ಶ್ರೀರಾಮಮಂದಿರದಲ್ಲಿ ಶ್ರೀಶಂಕರಾಚಾರ್ಯ ಭಾಗವತೀಯ ಜಗದ್ಗುರು ಶ್ರೀ ಗೋವಿಂದಾನಂದ ಸರಸ್ವತಿ ಮಾಹಸ್ವಾಮಿಗಳ 18ನೇ ಚಾತುರ್ಮಾಸ್ಯ ಧರ್ಮ ಪ್ರಚಾರದ ಪೂರ್ವಭಾವಿ ಸಭೆ ಹಮ್ಮಿಕೊಳ್ಳಲಾಯಿತು.
ತಲಕಾಡು ಶ್ರೀ ಗೋವಿಂದಾನಂದ ಸರಸ್ವತಿ ಮಹಾಸ್ವಾಮಿಗಳು ಚಾತುರ್ಮಾಸ್ಯದ ಪೋಸ್ಟರ್ ಮಾಹಿತಿ ಭಿತ್ತಿಪತ್ರ ಬಿಡುಗಡೆ ಮಾಡಿದರು
ನಂತರ ಮಾತನಾಡಿದ ಅವರು, ಆಷಾಡ ಶುದ್ಧ ಹುಣ್ಣಿಮೆ ವ್ಯಾಸ ಪೂರ್ಣಿಮೆಯಂದು ಚಾತುರ್ಮಾಸ್ಯ ವ್ರತ ಸಂಕಲ್ಪ ಮಾಡಲಿದ್ದು ಎರಡು ತಿಂಗಳು ಆಷಾಡ ಭಾದ್ರಪದ ಮಾಸದ ಹುಣ್ಣಿಮೆಯವರೆಗೂ ಧರ್ಮ ರಕ್ಷಣೆಗಾಗಿ ನಿರತಂತರವಾಗಿ ವಿವಿಧ ಹೋಮ ಹವನ, ವೇದ ಪ್ರವಚನ ನಡೆಯಲಿದೆ ಎಂದು ತಿಳಿಸಿದರು.
ಅನ್ನದಾಸೋಹ ಸಾಂಸ್ಕೃತಿಕ, ಸಂಗೀತ ಮತ್ತು ಭಜನಾ ಕಾರ್ಯಕ್ರಮಗಳನ್ನ ಆಯೋಜಿಸಿ ಯುವಸಮುದಾಯ ಮಹಿಳಾ ಸಂಘಗಳನ್ನ ಒಗ್ಗೂಡಿಸಿ ಪ್ರತಿನಿತ್ಯ ವಿಷ್ಣು-ಶಿವ ಲಲಿತ ಸಹಸ್ರನಾಮ, ರುದ್ರಪಾರಾಯಣ, ಹಮ್ಮಿಕೊಂಡು ಯುವಕರಲ್ಲಿ ಧರ್ಮಜಾಗೃತಿ ಮೂಡಿಸಲಾಗುವುದು ಎಂದು ಹೇಳಿದರು.
ನಂತರ ಶಾಸಕ ಟಿಎಸ್. ಶ್ರೀವತ್ಸ ಅವರು ಮಾತನಾಡಿ ತಲಕಾಡಿನ ಶ್ರೀ ಬಾಲಕೃಷ್ಣಾನಂದ ಮಹಾಸಂಸ್ಥಾನಮ್ ಮಠವು ಶುಕಮಹರ್ಷಿಗಳಿಂದ ಸ್ಥಾಪಿತವಾಗಿ ಗಂಗರ ರಾಜಗುರುಪೀಠವಾಗಿತ್ತು ಎನ್ನುವ ಪ್ರತೀತಿಯಿದೆ ಎಂದು ತಿಳಿಸಿದರು.
ಅದರ ಗತಕಾಲದ ವೈಭವ ಪರಂಪರೆ ಮತ್ತೊಮ್ಮೆ ಮರುಕಳಿಸುವಂತೆ ಅಭಿವೃದ್ಧಿ ಕಾರ್ಯಗಳನ್ನ ಮಾಡಿರುವ ಗೋವಿಂದಾನಂದ ಸರಸ್ವತಿ ಮಹಾಸ್ವಾಮಿಗಳ ಕಾರ್ಯ ಇನ್ನಿತರ ಸಣ್ಣಪುಟ್ಟ ಮಠಗಳಿಗೆ ಮಾದರಿಯಾಗಿದೆ ಎಂದು ತಿಳಿಸಿದರು.
ಗಜಾರಣ್ಯ ಕ್ಷೇತ್ರವಾಗಿತ್ತು ಕಾಲಕ್ರಮೇಣ ನಶಿಸಿಹೋದಾಗ ಗಜಾರಣ್ಯ ಕ್ಷೇತ್ರವನ್ನ ಮತ್ತೊಮ್ಮೆ ವಿಜೃಂಭಿಸಲು ಆರಾಧ್ಯದೇವರಾದ ಬಾಲಕೃಷ್ಣ, ಗಣಪತಿ ಆದ್ಯಲಕ್ಷ್ಮಿ ದೇವಾಲಯ, ದಾಸೋಹ ಭವನ, ಗೋಶಾಲೆ, ಗರುಭವನ, ಭಕ್ತಾಧಿಗಳಿಗೆ ವಸತಿನಿಲಯ ಇವೆಲ್ಲವನ್ನೂ ನಿರ್ಮಿಸಿ ಸಾವಿರಾರು ಸಂಖ್ಯೆಯಲ್ಲಿ ಭಕ್ತರಿಗೆ ಸುಸಜ್ಜಿತ ವ್ಯವಸ್ಥೆ ಮಾಡಿರುವ ಶ್ರೀ ಗೋವಿಂದಾನಂದ ಸರಸ್ವತಿ ಮಾಹಾಸ್ವಾಮಿಗಳ ಶ್ರಮ ಬಣ್ಣಿಸಲು ಆಗದು ಎಂದು ಹೇಳಿದರು.
ಮೂಡ ಮಾಜಿ ಅಧ್ಯಕ್ಷ ಹೆಚ್.ವಿ ರಾಜೀವ್ ಅವರು ಮಾತನಾಡಿ ಗೋಪಾಲನಂದ ಸರಸ್ವತಿ ಸ್ವಾಮಿಗಳ ನಂತರ 2009ರಲ್ಲಿ 85ನೇ ಪೀಠಾಧಿಪತಿಗಳಾಗಿ ಬಂದಂತಹ ಶ್ರೀ ಗೋವಿಂದಾನಂದ ಸರಸ್ವತಿ ಮಹಾಸ್ವಾಮಿಗಳು ಮಾಡಿರುವ ಸಾಧನೆ ಮೈಸೂರಿಗರು ಒಮ್ಮೆಯಾದರು ನೋಡಿ ಬನ್ನಿ ಎಂದು ಕರೆ ನೀಡಿದರು.
ಕೇವಲ ಒಂದು ಕೊಠಡಿ ಛತ್ರವಂತಾಗಿ ಶೋಚನೀಯ ಸ್ಥತಿಯಲ್ಲಿದ್ದ ಸ್ಥಳವನ್ನ ಅಭಿವೃದ್ಧಿ ಪಡಿಸಲು ಸವಾಲಗಳನ್ನು ಎದುರಿಸಿ ಮತ್ತೊಮ್ಮೆ ಗತವೈಭವದ ಇತಿಹಾಸವನ್ನ ಮರುಕಳಿಸುವಂತೆ ಶ್ರೀ ಬಾಲಕೃಷ್ಣಾನಂದ ಮಹಾಸಂಸ್ಥಾನಮ್ ಮಠವನ್ನ ಪುನರ್ ನಿರ್ಮಾಣ ಮಾಡಿದ್ದಾರೆ ಕರ್ನಾಟಕ ಸೇರಿದಂತೆ ತಮಿಳುನಾಡು, ಕೇರಳ, ಆಂಧ್ರ, ತೆಲಂಗಾಣದಲ್ಲಿ ಸಾವಿರಾರು ಭಕ್ತವೃಂದವನ್ನ ಸಂಪಾದಿಸಿದ್ದಾರೆ ಎಂದು ತಿಳಿಸಿದರು
ನಂತರ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ.ಟಿ. ಪ್ರಕಾಶ್ ಅವರು ಮಾತನಾಡಿ ಹಿಂದೂ ಸಮಾಜದ ಮಠಗಳ ಸ್ವಾಮೀಜಿಗಳು ಪೀಠದಲ್ಲಿ ಇರುವವರು ಆಷಾಡ ಹುಣ್ಣಿಮೆಯಿಂದ ಜುಲೈ 29ರಿಂದ 60ದಿನಗಳು ಚಾತುರ್ಮಾಸ್ಯ ವ್ರತ ಸಂಕಲ್ಪ ಮಾಡುತ್ತಾರೆ, ಧರ್ಮರಕ್ಷಣೆಗಾಗಿ ಪ್ರತಿಯೊಬ್ಬರು ಗುರುಗಳ ಮಾತುಗಳನ್ನ ಕೇಳಿ ನಡೆದರೆ ಇತಿಹಾಸ ಪರಂಪರೆ ಅರಿತು ಸಂಸ್ಕಾರ ಸಂಸ್ಕೃತಿ ಅಂಶಗಳೊಂದಿಗೆ ಆರೋಗ್ಯಕರ ವಾತಾವರಣ ಸಮಾಜದಲ್ಲಿ ಕಾಣಬಹುದು, ಆಷಾಡ ಮಾಸದಲ್ಲಿ ದೇವಿ ಆರಾಧನೆಯಿಂದ ಹೆಚ್ಚು ಅನುಷ್ಠಾನ ಶಕ್ತಿ ಪಡೆಯಬಹುದು, ವ್ಯಾಸ ಪೂರ್ಣಿಮೆ ಮತ್ತು ಉಪಾಕರ್ಮದಲ್ಲಿ ಗುರುಗಳಿಗೆ ಸಲ್ಲಿಸುವ ಗುರುಭಕ್ತಿ ನಮ್ಮ ಜೀವನದ ಉಜ್ವಲ ಭವಿಷ್ಯಕ್ಕೆ ಶಕ್ತಿತುಂಬುತ್ತದೆ ಎಂದು ತಿಳಿಸಿದರು.
ನಂತರ ವಿಪ್ರ ಮಹಿಳಾ ಸಂಗಮದ ಅಧ್ಯಕ್ಷೆ ಡಾ. ಲಕ್ಷ್ಮಿ ದೇವಿ ರವರು ಮಾತನಾಡಿ ತಲಕಾಡಿನಲ್ಲಿ ಗೋವಿಂದಾನಂದ ಸರಸ್ವತಿ ಸ್ವಾಮಿಗಳ ಚಾತುರ್ಮಾಸ್ಯ ವ್ರತದಲ್ಲಿ ಮಹಿಳಾ ಭಜನಾ ಮಂಡಳಿಯಿಂದ ವಿಷ್ಣು- ಲಲಿತಾ ಸಹಸ್ರನಾಮ, ಶಿವಸಹಸ್ರನಾಮ ರುದ್ರ ಪಾರಾಯಣ ನಡೆಸಲಾಗವುದು, ಸಾರಿಗೆ ಮತ್ತು ವಸತಿ ಪ್ರಸಾದ ವ್ಯವಸ್ಥೆ ಮಾಡಿದ್ದು ಆಸಕ್ತ ಭಜನಾ ಮಂಡಳಿಗಳು 7829067769 ಸಂಪರ್ಕಿಸಬಹುದು ಎಂದು ಹೇಳಿದರು.
ಈ ಸಂಧರ್ಭದಲ್ಲಿ ನಗರಪಾಲಿಕೆ ಮಾಜಿ ಸದಸ್ಯರಾದ ಮಾ ವಿ. ರಾಂಪ್ರಸಾದ್, ಸೌಭಾಗ್ಯಮೂರ್ತಿ, ವಿದ್ವಾನ್ ಅಂಬಾಪ್ರಸಾದ್, ಅಗಸ್ತ್ಯ ಸೊಸೈಟಿ ನಿರ್ದೇಶಕ ವಿಕ್ರಂ ಅಯ್ಯಂಗಾರ್, ನಿರೂಪಕ ಅಜಯ್ ಶಾಸ್ತ್ರಿ, ಹೊಯ್ಸಳ ಕರ್ನಾಟಕ ಸಂಘದ ನಿರ್ದೇಶಕ ರಂಗನಾಥ್ ಸುಬ್ಬರಾವ್, ಮಠದ ಆಡಳಿತಾಧಿಕಾರಿ ವಿಜಯಕುಮಾರ್, ಶ್ರೀ ರಾಮಾನುಜ ಸೊಸೈಟಿ ನಿರ್ದೇಶಕ ಟಿ.ಎಸ್. ಅರುಣ್, ವಿಪ್ರಜಾಗೃತಿ ವೇದಿಕೆ ಅಧ್ಯಕ್ಷ ಮುಳ್ಳೂರು ಸುರೇಶ್,ಗ್ರಾಜ್ಯುಯೇಟ್ ಬ್ಯಾಂಕ್ ನಿರ್ದೇಶಕಿ ವರಲಕ್ಷ್ಮಿ.ಆರ್,
ಜಯನಗರ ರಾಮಮಂದಿರ ಕಾರ್ಯದರ್ಶಿ ಅರುಣ್ ಶರ್ಮ, ಶೃತಿ, ಹರೀಶ್.ವಿ, ಆಶುಶಯನ, ಗಣೇಶ್, ನಾಗಭೂಷಣ್, ಪ್ರಶಾಂತ್, ವಿಶ್ವನಾಥ್, ಮಿರ್ಲೆ ಫಣೀಶ್, ಸುಚೀಂದ್ರ, ಮಂಜುನಾಥ್, ಪ್ರದೀಪ್, ರಘು, ವನಜ, ಅಂಜನ್, ಸುಬ್ಬಣ್ಣ, ಮುರಳಿ, ಭದ್ರಿ, ವೆಂಕಟೇಶ್ ರಾವ್, ಶೇಷಾಚಲ ಮತ್ತಿತರರು ಹಾಜರಿದ್ದರು.
