ಮೈಸೂರು: ಮೈಸೂರು ಬಿಇಎಂಎಲ್ ಸಂಸ್ಥೆಯ ಹಿರಿಯ ಉದ್ಯೋಗಿ ಶ್ರೀ ರಾಮು ಜೆ ಅವರು 1986 ರಿಂದ 2026 ರ ವರೆಗೆ ಸುಮಾರು 37 ವರ್ಷಗಳ ಕಾಲ ಸಮರ್ಪಣೆ, ಶ್ರದ್ಧೆ, ಮತ್ತು ನಿಷ್ಠೆಯಿಂದ ಸಾರ್ಥಕ ಸೇವೆ ಸಲ್ಲಿಸಿ ಇಂದು ಸೇವಾ ನಿವೃತ್ತಿ ಹೊಂದಿದ್ದಾರೆ.
ವೃತ್ತಿ ಜೀವನದ ಆರಂಭದಲ್ಲಿಯೇ ಬಿಇಎಂಎಲ್ ಎಸ್ಸಿ /ಎಸ್ಟಿ ನೌಕರರ ಕ್ಷೇಮಾಭಿವೃದ್ಧಿ ಸಂಘದ ಸಂಸ್ಥಾಪಕ ಸದಸ್ಯರಾಗಿ ಸೇವೆ ಸಲ್ಲಿಸಿದ ಅವರು ನೌಕರರ ಕಲ್ಯಾಣಕ್ಕಾಗಿ ಜನಾನುರಾಗಿ ಕಾರ್ಯಗಳನ್ನು ನಡೆಸಿ ಸಹೋದ್ಯೋಗಿಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ನಿವೃತ್ತಿಯ ದಿನವಾದ ಹಿಂದೂ ಬಿಇಎಂಎಲ್ ಸಂಸ್ಥೆಯ ಮುಖ್ಯ ದ್ವಾರದ ಮುಂಭಾಗದಲ್ಲಿರುವ ಭಾರತ ರತ್ನ ಡಾ. ಬಾಬಾ ಸಾಹೇಬ್ ಬಿ ಆರ್ ಅಂಬೇಡ್ಕರ್ ಅವರ ಪುತ್ತಳಿಗೆ ವಿದ್ಯುತ್ ದೀಪಾವಲಂಕಾರ ಮಾಡಿ ವಾದ್ಯಗೋಷ್ಠಿಯೊಂದಿಗೆ ಭವ್ಯ ಮೆರವಣಿಗೆಯಲ್ಲಿ ಮಾಲಾರ್ಪಣೆ ಮಾಡಿ ಜೈ ಭೀಮ್ ಹಾಗೂ ಡಾ.ಬಿ ಆರ್ ಅಂಬೇಡ್ಕರ್ ಜಯ ಘೋಷಣೆಗಳೊಂದಿಗೆ ಗೌರವ ಸಮರ್ಪಣೆ ಕಾರ್ಯಕ್ರಮವನ್ನು ಆಯೋಜಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಬಿ ಇ ಎಂ ಎಲ್ ಎಸ್ಸಿ /ಎಸ್ಟಿ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾದ ಮಾದೇವ್ ಎಂ ವಿ ಹಾಗೂ ಪದಾಧಿಕಾರಿಗಳಾದ ಲೋಕೇಶ್ ಪಿ. ಮಹಾದೇವಸ್ವಾಮಿ, ಮಂಜುನಾಥ,
ರವಿಕುಮಾರ್, ಬಿಇಎಂಎಲ್ ಕಾರ್ಮಿಕ ಸಂಘದ ಅಧ್ಯಕ್ಷರಾದ ದಿವಾಕರ್, ಖಜಂಚಿ ವಸಂತ್ ಕೆ,ಬೆಮೋಗ್ ನ ಮಾದೇಗೌಡ, ಮಾಜಿ ಪದಾಧಿಕಾರಿಗಳಾದ ಎಂಡಿ ರಾಜಶೇಖರ್ ಮೂರ್ತಿ, ಬಾಲಕೃಷ್ಣ, ಶಿವಯ್ಯ, ಒಂದು ಹೆಜ್ಜೆ ರಕ್ತದಾನಿ ಬಳಗದ ಅಧ್ಯಕ್ಷರಾದ ರಕ್ತದಾನಿ ಮಂಜು, ಗುತ್ತಿಗೆ ಕಾರ್ಮಿಕ ಸಂಘದ ಅಧ್ಯಕ್ಷರಾದ ಪರಮೇಶ್, ಕಾರ್ಯದರ್ಶಿ ಶ್ರೀನಿವಾಸ್, ಉಪಸ್ಥಿತರಿದ್ದರು.
ಶ್ರೀ ರಾಮು ಜೆ ಅವರು ಸುದೀರ್ಘ ಸೇವೆ ಸಂಘಟನೆಗಳಿಗೆ ನೀಡಿದ ಅಮೂಲ್ಯ ಕೊಡುಗೆ ಮತ್ತು ಸಾಮಾಜಿಕ ಕಾರ್ಯಗಳನ್ನು ಅಭಿನಂದಿಸಿದರು.
ಬಿಇಎಂಎಲ್ ವಿವಿಧ ಸಂಘಗಳ ಚುನಾಯಿತ ಅಧ್ಯಕ್ಷರು ಪದಾಧಿಕಾರಿಗಳು ಸಹೋದ್ಯೋಗಿಗಳು ಬಂಧುಗಳು ಹಾಗೂ ಹಿತೈಷಿಗಳು ಹಾಜರಿದ್ದರು.
ಶ್ರೀ ರಾಮು ಜೆ ಅವರ ಸೇವೆಯನ್ನು ಸ್ಮರಿಸಿ ಅಭಿನಂದಿಸಿ, ಅವರ ನಿವೃತ್ತಿ ಜೀವನವು ಆರೋಗ್ಯ ನೆಮ್ಮದಿ ಸಂತೋಷ ಮತ್ತು ಸಮೃದ್ಧಿಯಿಂದ ಕೂಡಿರಲೆಂದು ಎಲ್ಲರೂ ಹಾರೈಸಿದರು.
