ಮೈಸೂರು: ಕರ್ನಾಟಕ ಸೇನಾ ಪಡೆ ವತಿಯಿಂದ ಶ್ರೀ ಶಂಕರ ಮಠ ದಲ್ಲಿ ಹಿಂದೂ ಧರ್ಮವನ್ನು ಪುನುರುತ್ತಾನಗೊಳಿಸಿದ ಆಚಾರ್ಯತ್ರಯರಲ್ಲಿ ಒಬ್ಬರಾದ ಶ್ರೀ ಶಂಕರಾಚಾರ್ಯರ ಜಯಂತಿ ಅಂಗವಾಗಿ ವಿಶ್ವ ತತ್ವಜ್ಞಾನಿಗಳ ದಿನಾಚರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ವಿಧಾನ ಪರಿಷತ್ ಸದಸ್ಯರಾದ ಸಿ ಎನ್ ಮಂಜೇಗೌಡ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಶಂಕರಾಚಾರ್ಯರು ದೈವಾಂಶ ಸಂಭೂತರು, ಹಿಂದೂ ಧರ್ಮವನ್ನು ಜಗತ್ತಿನ ಉದ್ದಗಲಕ್ಕೂ ವಿಸ್ತರಿಸಿದವರು ಎಂದು ಬಣ್ಣಿಸಿದರು.
ಅತೀ ಚಿಕ್ಕ ವಯಸ್ಸಿನಲ್ಲೇ ದೇಶ ಪರ್ಯಟನೆ ಮಾಡಿದವರು. ಈಗಿನ ವಿಧ್ಯಾರ್ಥಿಗಳು ಅವರಂತೆ ಮೇಧಾವಿ ತತ್ವಜ್ಞಾನಿಗಳಾಬೇಕು ವಿಧ್ಯಾರ್ಥಿಗಳು ಸಮಯವನ್ನು ವ್ಯರ್ಥ ಮಾಡದೆ ಚೆನ್ನಾಗಿ ಓದಿ ಮುಂದೆ ಬರಬೇಕು ಎಂದು ತಿಳಿಹೇಳಿದರು.
ಕಾರ್ಯಕ್ರಮದಲ್ಲಿ ಬಸವಮಾರ್ಗ ಫೌಂಡೇಶನ್ ಸಂಸ್ಥಾಪಕರಾದ ಎಸ್ ಬಸವರಾಜು, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಎಂ ಬಿ ಮಂಜೇಗೌಡ,ನಗರ ಪಾಲಿಕೆ ಮಾಜಿ ಸದಸ್ಯ ಎನ್ ಧ್ರುವರಾಜ್, ಡಾ. ಕೃಷ್ಣ ವೆಂಕಟಸ್ವಾಮಿ, ವಾಸ್ತುಶಿಲ್ಪಿ ಪಾರ್ವತಿ ರಾಮಕೃಷ್ಣ, ಡಾ. ಅಜಯ್ ಕುಮಾರ್ ಜೈನ್, ದೇವಸ್ಥಾನದ ಶಿಲ್ಪಿ ದೇವರಾಜ್, ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕೆಗಳ ಅಭಿವೃದ್ಧಿ ಸಂಘದ ಅಧ್ಯಕ್ಷ ಮಂಜುನಾಥ್, ಬಿಗಿನರ್ಸ್ ಬೆಂಚ್ ಸಂಸ್ಥಾಪಕಿ ರಶ್ಮಿ ಕಾವೇರಮ್ಮ ಅವರಿಗೆ ಶ್ರೀ ಶಂಕರಾಚಾರ್ಯ ಸೇವಾ ರತ್ನ ಪ್ರಶಸ್ತಿಯನ್ನು ಮುಡಾ ಮಾಜಿ ಅಧ್ಯಕ್ಷರಾದ ಹೆಚ್.ವಿ ರಾಜೀವ್ ಸವರು ಪ್ರದಾನ ಮಾಡಿದರು.
ಶ್ರೀ ಶಂಕರಾಚಾರ್ಯರ ಭಾವಚಿತ್ರಕ್ಕೆ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ ಟಿ ಪ್ರಕಾಶ್ ಅವರು ಪುಷ್ಪಾರ್ಚನೆ ಮಾಡಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಡಾ. ರಘುರಾಂ ಕೆ ವಾಜಪೇಯಿ, ಕೆ ಎನ್ ನಾಗೇಗೌಡ, ಡಾ. ಪುಷ್ಪ ಎ ಅಯ್ಯಂಗಾರ್, ಡಾ. ಲೀಲಾ ಕೆ ಪ್ರಕಾಶ್, ಕರ್ನಾಟಕ ಸೇನಾ ಪಡೆ ರಾಜ್ಯಾಧ್ಯಕ್ಷ ಚಾ ರಂ ಶ್ರೀನಿವಾಸ ಗೌಡ, ಜಿಲ್ಲಾಧ್ಯಕ್ಷ ತೇಜೇಶ್ ಲೋಕೇಶ್ ಗೌಡ, ಪ್ರಭುಶಂಕರ, ಕೃಷ್ಣಪ್ಪ, ಹನುಮಂತಯ್ಯ, ನೇಹಾ, ಜೋತಿ, ರಘು ಅರಸ್, ಅಂಬಾ ಅರಸ್, ಬಸವರಾಜು, ಪ್ರಭಾಕರ್, ಶಿವರಾಂ, ಬಸವರಾಜು, ತಾಯೂರು ಗಣೇಶ್ , ಮಹಾದೇವ ಸ್ವಾಮಿ ರವೀಶ್, ರಮೇಶ್ ಮುಂತಾದವರು ಪಾಲ್ಗೊಂಡಿದ್ದರು.
