ಎಚ್ ಡಿ ಕೋಟೆ: ಕಬಿನಿ ಜಲಾಶಯವು ಭರ್ತಿಯಾಗುವ ಹಂತಕ್ಕೆ ಸಮೀಪಿಸಿದೆ. ಜಲಾಶಯದ ನೀರಿನ ಮಟ್ಟ 2282.04 ಅಡಿ ತಲುಪಿದ್ದು, ಗರಿಷ್ಠ ಮಟ್ಟ 2284.00 ಅಡಿಗೆ ಕೇವಲ 1.96 ಅಡಿ ಬಾಕಿ ಇದೆ.
ಜಲಾಶಯದ ಗರಿಷ್ಠ ಸಾಮರ್ಥ್ಯ 19.52 ಟಿಎಂಸಿ ಇದ್ದು, ಪ್ರಸ್ತುತ 18.26 ಟಿಎಂಸಿ ನೀರು ಸಂಗ್ರಹವಾಗಿದೆ. ಕಳೆದ ವರ್ಷ ಇದೇ ದಿನ 18.79 ಟಿಎಂಸಿ ಇತ್ತು.
ಜಲಾಶಯಕ್ಕೆ ಒಳಹರಿವು 22,256 ಕ್ಯುಸೆಕ್ ಗೆ ಏರಿಕೆಯಾಗಿದೆ. ಕಳೆದ ವರ್ಷ ಇದೇ ದಿನ 16,024 ಕ್ಯುಸೆಕ್ ಇತ್ತು.
ಜಲಾಶಯದಿಂದ ನದಿಗೆ 27,000 ಕ್ಯುಸೆಕ್ ನೀರನ್ನು ಹೊರಬಿಡಲಾಗುತ್ತಿದೆ. ಕಳೆದ ವರ್ಷ 16,000 ಕ್ಯುಸೆಕ್ ಇತ್ತು.
ಜಲಾಶಯದ ಕ್ಯಾಚ್ಮೆಂಟ್ ಪ್ರದೇಶದಲ್ಲಿ ಕಳೆದ 24 ಗಂಟೆಯಲ್ಲಿ 45 ಮಿ.ಮೀ. ಮಳೆಯಾಗಿದೆ. ಆವಿಯಾಗುವಿಕೆಯಿಂದಾಗಿ 9.98 mcft ನೀರು ನಷ್ಟವಾಗಿದೆ.
ಜಲಾಶಯದ ನೀರಿನ ಮಟ್ಟ ವೇಗವಾಗಿ ಏರುತ್ತಿರುವುದರಿಂದ ಒಂದೆರಡು ದಿನಗಳಲ್ಲಿ ಜಲಾಶಯ ಭರ್ತಿಯಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
