ಮೈಸೂರು: ಪೂರ್ವ ಬಡಾವಣೆಗಳ ಒಕ್ಕೂಟ ಹಾಗೂ ಸರ್ದಾರ್ ವಲ್ಲಭಭಾಯಿ ಪಟೇಲ್ ನಗರದ ನಿವಾಸಿಗಳು ಜೈ ಭೀಮ್ ಬಂಧು ಬಳಗದವರು ಇತರೆ ಸಂಘ ಸಂಸ್ಥೆ ನೆರವಿನಲ್ಲಿ ದೇವೇಗೌಡ ಸರ್ಕಲ್ ಬಳಿ ರಮನಹಳ್ಳಿ ಪಟ್ಟಣ ಪಂಚಾಯಿತಿಯ ನೂತನ ಕಚೇರಿಯನ್ನು ಅಲ್ಲೇ ಉಳಿಸಿಕೊಡಬೇಕೆಂದು ಮನವಿ ಮಾಡಿದ್ದಾರೆ.
ಇಂದು ಈ ಎಲ್ಲಾ ಸಂಘಟನೆಗಳು ಬಡಾವಣೆಯ ನಿವಾಸಿಗಳೊಂದಿಗೆ ಜಿಲ್ಲಾಧಿಕಾರಿಗಳನ್ನು ಭೇಟಿ ನೀಡಿ ಮನವಿ ಸಲ್ಲಿಸಿದರು.
ಸಾರ್ವಜನಿಕರ ಹಿತದೃಷ್ಟಿಯಿಂದ ಇದು ತುಂಬಾ ಅನುಕೂಲವಾಗಿದೆ ಹಾಗೂ ಸಾರ್ವಜನಿಕರಿಗೆ ತುಂಬಾ ಹತ್ತಿರವಿದ್ದು ಸುತ್ತಮುತ್ತಲಿನ 24 ಖಾಸಗಿ ಬಡಾವಣೆಗಳ ಜನರಿಗೆ, ಹಿರಿಯರಿಗೆ ಅನುಕೂಲವಾಗಿದೆ ಎಂದು ಬಡಾವಣೆಯ ನಿವಾಸಿಗಳು ತಿಳಿಸಿದರು.
ಅಲ್ಲದೆ ಅಧಿಕಾರಿಗಳು ಸಮಸ್ಯೆಗಳನ್ನು ಆಲಿಸಿ ಚೆನ್ನಾಗಿ ಕೆಲಸ ಮಾಡಿ ಕೊಡುತ್ತಿದ್ದಾರೆಂದು ಬಡಾವಣೆ ನಿವಾಸಿಗಳು ವಿವರಿಸಿದರು.
ಈ ವೇಳೆ ನಿವೃತ್ತ ಎಸಿಪಿ ನಟರಾಜ್ ಹಾಗೂ ಜೈ ಭೀಮ್ ಬಂಧು ಬಳಗ ಅಧ್ಯಕ್ಷರಾದ ರಂಗಸ್ವಾಮಿ, ವೀರಶೈವ ಮುಖಂಡರಾದ ನಂಜುಂಡಸ್ವಾಮಿ, ಮಾಲಿಂಗ್ ಸ್ವಾಮಿ ಅಜಿತ್, ಗಗನ್ ಮತ್ತಿತರರು ಹಾಜರಿದ್ದರು.
