(ವರದಿ:ಸಿದ್ದರಾಜು,ಕೊಳ್ಳೇಗಾಲ)
ಕೊಳ್ಳೇಗಾಲ: ಸೂಪರ್ ಎಕ್ಸೆಲ್ ಬೈಕ್ ಹಾಗೂ ಮಹೇಂದ್ರ ಪಿಕಪ್ ವಾಹನ ಮುಖಾ ಮುಖಿ ಡಿಕ್ಕಿಯಾಗಿ ಸವಾರರಿಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ಹನೂರು ತಾಲ್ಲೂಕು ಕೌದಳ್ಳಿ ಸಮೀಪ ನಡೆದಿದೆ.
ಕೌದಳ್ಳಿ ಸಮೀಪ ಕಕ್ಕೆಹಳ್ಳದ ಬಳಿ ಈ ಅಪಘಾತ ಸಂಭವಿಸಿದ್ದು,
ಹನೂರು ತಾಲೂಕಿನ ಹಳೇ ಮಾರ್ಟಳ್ಳಿಯ ಯುವರಾಜ್ (50) ಹಾಗೂ ಮದ್ದೂರು ತಾಲೂಕಿನ ಎಡಕೋಡಳ್ಳಿ ಗ್ರಾಮದ ಶಶಾಂಕ್ (25) ಮೃತಪಟ್ಟ ದುರ್ದೈವಿಗಳು.
ಈ ಇಬ್ಬರು ಕಾರ್ಯನಿಮಿತ್ತ ವಡಕೆಹಳ್ಳದಿಂದ ಕೌದಳ್ಳಿ ಗ್ರಾಮಕ್ಕೆ ಬರುವ ವೇಳೆ ಕೌದಳ್ಳಿಯ ಕಕ್ಕೆಹಳ್ಳದ ಹತ್ತಿರ ಎದುರಿನಿಂದ ವೇಗವಾಗಿ ಬಂದ ಮಹೇಂದ್ರ ಪಿಕಪ್ ವಾಹನ ಬೈಕ್ ಗೆ ಡಿಕ್ಕಿ ಹೊಡೆದಿದೆ.
ಡಿಕ್ಕಿಯ ರಭಸಕ್ಕೆ ಬೈಕ್ ಸವಾರರ
ತಲೆಗೆ ತೀವ್ರವಾದ ಪೆಟ್ಟು ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಮಾಹಿತಿ ತಿಳಿದು ಸ್ಥಳಕ್ಕಾಗಮಿಸಿದ ರಾಮಾಪುರ ಠಾಣೆ ಪೊಲೀಸರು ಮೃತ ದೇಹಗಳನ್ನು ಹನೂರಿನ ಸರ್ಕಾರಿ ಆಸ್ಪತ್ರೆಗೆ ರವಾನಿಸಿ ಮುಂದಿನ ಕ್ರಮ ಕೈಗೊಂಡರು.
ಸ್ಥಳಕ್ಕೆ ಚಾಮರಾಜನಗರ ಅಡಿಷನಲ್ ಎಸ್ಪಿ ಶಶಿಧರ್ ಮತ್ತು ಕೊಳ್ಳೇಗಾಲ ಡಿವೈಎಸ್ಪಿ ಮೋಹನ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಪ್ರತಿನಿತ್ಯ ಸಾವಿರಾರು ಭಕ್ತರು ಮಲೈ ಮಹದೇಶ್ವರ ಬೆಟ್ಟಕ್ಕೆ ಬಂದು ಹೋಗುತ್ತಾರೆ. ಆದರೆ ಹನೂರಿನಿಂದ ಕೌದಳ್ಳಿ ವರೆಗೂ ಹೆದ್ದಾರಿಯಲ್ಲಿ ಯಾವುದೇ ಸೂಚನಾ ಫಲಕಗಳು. ರಸ್ತೆ ಡುಬ್ಬಗಳನ್ನು ನಿರ್ಮಿಸಿಲ್ಲ.
ತಿರುವಿನ ಬಗ್ಗೆ ಯಾವುದೇ ಎಚ್ಚರಿಕೆಯ ಫಲಕಗಳನ್ನು ಸಹ ಅಳವಡಿಸಿಲ್ಲ. ರಸ್ತೆ ಅಪಘಾತದಿಂದ ಹಲವಾರು ಜನ ಮಂದಿ ಪ್ರಾಣ ಕಳೆದುಕೊಂಡಿದ್ದು. ಅವರ ಕುಟುಂಬಕ್ಕೆ ದಿಕ್ಕು ಇಲ್ಲದಂತಾಗಿದೆ.
ಇಷ್ಟೊಂದು ಅಪಘಾತಗಳು ಸಂಭವಿಸುತ್ತಿದ್ದರೂ ಸಂಬಂಧಪಟ್ಟ ಯಾವುದೇ ಅಧಿಕಾರಿಗಳು ಎಚ್ಚೆತ್ತುಕೊಂಡಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
