(ವರದಿ:ಸಿದ್ದರಾಜು,ಕೊಳ್ಳೇಗಾಲ)
ಕೊಳ್ಳೇಗಾಲ: ಇದೇ 21ರಂದು ತಾಲ್ಲೂಕಿನ ಶಿವನಸಮುದ್ರದ ಮಧ್ಯರಂಗ ಖ್ಯಾತಿಯ
ಶ್ರೀ ರಂಗನಾಯಕಿ ಸಮೇತ ಜಗನ್ಮೋಹನ ಶ್ರೀ ರಂಗನಾಥಸ್ವಾಮಿ ದೇವಾಲಯ ಲೋಕಾರ್ಪಣೆ ಕಾರ್ಯಕ್ರಮ ನಡೆಯಲಿದ್ದು ಸಕಲ ಸಿದ್ಧತೆ ಭರದಿಂದ ಸಾಗಿದೆ.
ಈ ಕಾರ್ಯಕ್ರಮಕ್ಕೆ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ವರು ಆಗಮಿಸಲಿದ್ದಾರೆ. ಜಿಲ್ಲಾಧಿಕಾರಿ ಶ್ರೀ ರೂಪ ಅವರು ಎಲ್ಲಾ ಸಿದ್ಧತಾ ಕಾರ್ಯಗಳನ್ನು ಪರಿಶೀಲಿಸಿದರು.
ಇಂದು ದೇವಾಲಯಕ್ಕೆ ಭೇಟಿ ನೀಡಿ ಪೂರ್ವ ಸಿದ್ಧತೆಗಳನ್ನು ಪರಿಶೀಲಿಸಿ ಅಗತ್ಯ ಕ್ರಮಗಳ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿ ಯಾವುದೇ ಲೋಪವಾಗದಂತೆ ಕಟ್ಟುನಿಟಿನ ಕ್ರಮ ವಹಿಸುವಂತೆ ಅಧೀನ ಅಧಿಕಾರಿಗಳಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಶ್ರೀರೂಪಾ ಅವರು, ದೇವಾಲಯ ಅದಾಗಲೇ ನಿರ್ಮಾಣವಾಗಿರುವುದರಿಂದ ಕಳಸ ಪ್ರತಿಷ್ಠಾಪನೆ ಪ್ರಧಾನ ಕಾರ್ಯಕ್ರಮವಾಗಿದೆ. ಅಂದಿನ ಕಾರ್ಯಕ್ರಮಕ್ಕೆ ರಾಜ್ಯದ ಉಪಮುಖ್ಯಮಂತ್ರಿಗಳಾದ ಡಿ.ಕೆ ಶಿವಕುಮಾರ್ ಅವರು ಆಗಮಿಸಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್, ಮುಜರಾಯಿ ಸಚಿವ ರಾಮಲಿಂಗರೆಡ್ಡಿ ಅವರ ಉಪಸ್ಥಿತಿಯಲ್ಲಿ ದೇಗುಲ ಲೋಕಾರ್ಪ ಣೆಗೊಳ್ಳಲಿದೆ ಎಂದು ಹೇಳಿದರು.
ಹನೂರು ಶಾಸಕ ಎಂ. ಆರ್.ಮಂಜು ನಾಥ್ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶಾಸಕರಾದ ಎ.ಆರ್.ಕೃಷ್ಣಮೂರ್ತಿ, ಸಿ. ಪುಟ್ಟ ರಂಗಶೆಟ್ಟಿ, ಎಚ್.ಎಂ.ಗಣೇಶ್ ಪ್ರಸಾದ್ ಭಾಗವಹಿಸಲಿದ್ದಾರೆ. ಅದಕ್ಕಾಗಿ ಈಗಾಗಲೇ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮಕ್ಕೆ ಸುಮಾರು 3000 ಜನ ಸೇರುವ ನಿರೀಕ್ಷೆಯಿದೆ,ಊಟದ ವ್ಯವಸ್ಥೆ ದೀಪಾಲಂಕಾರ ಸೇರಿದಂತೆ ಇನ್ನಿತರ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ದೇವಾಲಯ ಲೋಕಾರ್ಪಣೆ ಹಿನ್ನೆಲೆಯಲ್ಲಿ ಕಳೆದ 17 ರಿಂದ ಹೋಮ ಅವನ ಸೇರಿದಂತೆ ವಿವಿಧ ಪೂಜಾ ಕಾರ್ಯಕ್ರಮಗಳು ನೆರವೇರಿತ್ತಲಿವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಉಪ ವಿಭಾಗಾಧಿಕಾರಿ ದಿನೇಶ್ ಕುಮಾರ್ ಮೀನಾ, ತಹಸಿಲ್ದಾರ್ ಬಸವರಾಜು, ಉಪತಹಸಿಲ್ದಾರ್ ಕೃಪಾಕರ್, ಸಮೂಹ ದೇವಾಲಯಗಳ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್, ಅರ್ಚಕರಾದ ಶ್ರೀನಿವಾಸ ರಂಗ ಚಾರ್, ಮಾಧವನ್ ಭಟ್, ಶ್ರೀಧರಾಚಾರ್, ಮಧುಸೂದನ್, ಅನಂತ ಸತ್ಯನಾರಾಯಣ ಜೋಯಿಸ್, ಅನಂತನಾರಾಯಣ ಜೋಯಿಸ್, ಶೇಷಾದ್ರಿ ಭಟ್, ಕಂದಾಯ ನಿರೀಕ್ಷಕ ರಂಗಸ್ವಾಮಿ, ಮುಖಂಡರುಗಳಾದ ಪಾಳ್ಯ ಗೋಪಾಲನಾಯಕ, ಚನ್ನ ಲಿಂಗನಹಳ್ಳಿ ವೆಂಕಟೇಶ್, ಮಹಾದೇವ್, ಮುರುಗೇಶ್ ಮತ್ತಿತರರು ಹಾಜರಿದ್ದರು.
