ಯಾದಗಿರಿ: ಜಿಲ್ಲೆಯ ಜೀವನದಿ
ಭೀಮಾನದಿಗೆ ನೀರಿನ ಹರಿವು ಹೆಚ್ಚಾಗಿದ್ದು ರೈತರಿಗೆ ಒಂದು ಕಡೆ ಸಂತಸವಾದರೆ ಮತ್ತೊಂದು ಕಡೆ ಸಂಕಟ ಕೂಡಾ ಉಂಟಾಗಿದೆ.
ಅದೇನು ಸಂಕಟ ಅಂತೀರಾ,ಭೀಮಾನದಿ ತೀರದ ರೈತರ ಜಮೀನಿನಲ್ಲಿ ನೀರಿನ ಜತೆಗೆ ಮೊಸಳೆಗಳ ಕಾಟ ಶುರುವಾಗಿದೆ.
ಮೊಸಳೆಗಳ ಉಪಟಳದಿಂದ ರೈತರು ತೀವ್ರ ಆತಂಕಗೊಂಡಿದ್ದಾರೆ.ಅದರಲ್ಲೂ
ಭತ್ತದ ಜಮೀನಿಗೆ ದೊಡ್ಡ ಗಾತ್ರದ ಮೊಸಳೆಗಳು ನುಗ್ಗುತ್ತಿವೆ.
ಇದರಿಂದಾಗಿ ಜಮೀನಿನಲ್ಲಿ ಕೃಷಿ ಕೆಲಸ ಮಾಡಲು ನದಿ ತೀರದ ಗ್ರಾಮದ ರೈತರು ಹೆದರುತ್ತಿದ್ದಾರೆ.
ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ
ಬೀರನಾಳ ಗ್ರಾಮದ ರೈತರ ಜಮೀನಿಗೆ ಇಂದು ಬೃಹತ್ ಮೊಸಳೆ ನುಗ್ಗಿದ್ದು,ರೈತರು, ಸ್ಥಳೀಯರು ಮೊಸಳೆಯನ್ನು ದಾರದಿಂದ ಬಿಗಿದು ಕಟ್ಟಿದ್ದಾರೆ.
ಸ್ಥಳಕ್ಕೆ ಕೂಡಲೇ ಅರಣ್ಯಾಧಿಕಾರಿಗಳು ಬಂದು ಮೊಸಳೆ ರಕ್ಷಣೆ ಮಾಡಬೇಕು, ರೈತರ ಜಮೀನಿಗೆ ಮೊಸಳೆ ಬರದಂತೆ ಮಾಡಬೇಕು,ರೈತರಿಗೂ ರಕ್ಷಣೆ ಕೊಡಬೇಕು ಗ್ರಾಮಸ್ಥರು ಆಗ್ರಹಿಸಿದ್ದಾರೆ.
