ಕೊಳ್ಳೇಗಾಲ: ಶಾಸಕ ಎ ಆರ್ ಕೃಷ್ಣಮೂರ್ತಿ ಅವರಿಗೆ ಸಚಿವ ಸ್ಥಾನ ನೀಡುವಂತೆ ಮುಸ್ಲಿಂ ಸಮುದಾಯದ ಮುಖಂಡರು ಒತ್ತಾಯಿಸಿದ್ದಾರೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖಂಡರು ಎ ಆರ್ ಕೆ ಗೆ ಕಾಂಗ್ರೆಸ್ ಹೈಕಮಾಂಡ್ ಮಂತ್ರಿ ಸ್ಥಾನ ನೀಡಲೇಬೇಕು ಎಂದು ಆಗ್ರಹಿಸಿದರು.
ನಗರಸಭಾ ನಾಮನಿರ್ದೇಶನ ಸದಸ್ಯ ಆನ್ಸರ್ ಬೇಗ್ ಮಾತನಾಡಿ 2023 ರ ಸಾರ್ವತ್ರಿಕ ಚುನಾವಣೆಯಲ್ಲಿ ಅತ್ಯಧಿಕ ಮತಗಳ ಅಂತರದಿಂದ ಗೆದ್ದಿರುವ ಶಾಸಕ ಎ ಆರ್ ಕೃಷ್ಣಮೂರ್ತಿ ಅವರು ಮೂರು ಬಾರಿ ಶಾಸಕರಾಗಿ ಒಮ್ಮೆ ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿದ್ದವರು ಎಂದು ಹೇಳಿದರು.
ತಂದೆ ಬಿ ರಾಚಯ್ಯ ಅವರ ಕೊಡುಗೆ ಜಿಲ್ಲೆಗೆ ಬಹಳಷ್ಟಿದೆ. ತಂದೆ ರಾಜಕೀಯ ಭೀಷ್ಮ ರಾಚಯ್ಯರಂತೆ ಅವರ ಹಾದಿಯಲ್ಲಿ ನಡೆದುಕೊಂಡು ಬಂದಿದ್ದಾರೆ. ಎಆರ್ಕೆ ಅವರಿಗೆ ಜಿಲ್ಲೆಯ ಜನರ ನಾಡಿಮಿಡಿತ ಗೊತ್ತು. ಪಕ್ಷ ಸಂಘಟನೆ ಮಾಡುವ ಎಲ್ಲ ಚಾಕ ಚಕ್ಕತೆ ಇದೆ. ಜಿಲ್ಲೆಯನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯಲು ಪಣತೊಟ್ಟಿದ್ದಾರೆ ಎಲ್ಲಾ ಸಮುದಾಯದ ಹಾಗೆ ನಮ್ಮ ಸಮುದಾಯಕ್ಕೂ ಸಾಕಷ್ಟು ಅನುದಾನ ನೀಡಿದ್ದಾರೆ ಎಂದು ಹೇಳಿದರು.
ಕ್ಷೇತ್ರದ ಎಲ್ಲಾ ಶಾದಿ ಮಹಲ್ ಗಳನ್ನು ಪೂರ್ಣಗೊಳಿಸುವ ಭರವಸೆ ನೀಡಿದ್ದಾರೆ. ಅಲ್ಪಸಂಖ್ಯಾತರ ಶಾಲೆ ಯಾರ ಅವಧಿಯಲ್ಲೂ ತಂದಿರಲಿಲ್ಲ ಈ ಬಾರಿ ಇವರ ಅವಧಿಯಲ್ಲಿ ಅಲ್ಪಸಂಖ್ಯಾತರ ಶಾಲೆ ತೆರೆದು ಸಮುದಾಯಕ್ಕೆ ಅನುಕೂಲ ಮಾಡಿಕೊಟ್ಟಿದ್ದಾರೆ ಇಂತಹ ನಾಯಕರಿಗೆ ಕಾಂಗ್ರೆಸ್ ಹೈಕಮಾಂಡ್ ಮಂತ್ರಿ ಸ್ಥಾನ ನೀಡಬೇಕು ಎಂದು ಸಮುದಾಯ ಒತ್ತಾಯಿಸುತ್ತದೆ ಎಂದು ತಿಳಿಸಿದರು.
ಕಳೆದ ಮೂರು ವರ್ಷಗಳಲ್ಲಿ ನಮ್ಮ ಸಮುದಾಯದ ಶಾದಿ ಮಹಲ್ ಗಳಿಗೆ ಒಂದೂವರೆ ಕೋಟಿ ಅನುದಾನ ಮಾತ್ರ ನೀಡಿದ್ದಾರೆ ಅದರಲ್ಲಿ ಯಳಂದೂರು ಶಾದಿ ಮಹಲ್ ಗೆ 25 ಲಕ್ಷ,ಕೊಳ್ಳೇಗಾಲ ಮಹಲ್ ಗೆ 50 ಲಕ್ಷ ರೂ. ಸೇರಿದಂತೆ ಒಟ್ಟು 75 ಲಕ್ಷ ರೂಗಳನ್ನು ಮಾತ್ರ ಸರ್ಕಾರ ಬಿಡುಗಡೆ ಮಾಡಿದೆ. ಆದ್ದರಿಂದ ಶಾಸಕರು ಕ್ಷೇತ್ರದ ಶಾದಿ ಮಹಲ್ ಗಳನ್ನು ಪೂರ್ಣಗೊಳಿಸಬೇಕು ಹಾಗೂ ಮುಸ್ಲಿಮರ ಸ್ಮಶಾನಗಳ ಅಭಿವೃದ್ಧಿಗೆ ಅನುದಾನ ನೀಡಬೇಕೆಂದು ಮನವಿ ಮಾಡಿದರು.
ನಂತರ ಮಾತನಾಡಿದ ಜಿಲ್ಲಾ ಅಲ್ಪಸಂಖ್ಯಾತರ ಘಟಕದ ಉಪಾಧ್ಯಕ್ಷ ಇನಾಯತ್ ಪಾಷ, ಶಾಸಕ ಎ.ಆರ್ ಕೃಷ್ಣಮೂರ್ತಿ ಅವರು ಅನುಭವಿ ರಾಜಕಾರಣಿಕೆ ಜನಪರ ಕಾಳಜಿ ಹೊಂದಿರುವ ವರು,ಎಲ್ಲಾ ಸಮುದಾಯದವರನ್ನು ಸಮನಾಗಿ ಕೊಂಡೊಯ್ಯುವ ಸಮಾನತೆಯ ಹರಿಕಾರರು ಅವರಿಗೆ ಮಂತ್ರಿ ಸ್ಥಾನ ನೀಡಲೇಬೇಕು ನೀಡಿದರೆ ಜಿಲ್ಲೆಯನ್ನು ಅಭಿವೃದ್ಧಿಯತ್ತ ಕುಂಡಯ್ಯಲ್ಲಿದ್ದಾರೆ ಅವರ ತಂದೆಯವರು ಸಹ ಸಾಕಷ್ಟು ಅಭಿವೃದ್ಧಿ ಮಾಡಿದ್ದಾರೆ ಕಾಂಗ್ರೆಸ್ ಹೈಕಮಾಂಡ್ ಮಂತ್ರಿ ಸ್ಥಾನ ನೀಡಲೇಬೇಕು ಎಂದು ಸಮುದಾಯದ ಪರವಾಗಿ ಒತ್ತಾಯಿಸಿದರು.
ಯಳಂದೂರು ಪಾಪಂ ನಾಮನಿರ್ದೇಶನ ಸದಸ್ಯ ಮುನವರ್ ಬೇಗ್, ಅಲ್ಪಸಂಖ್ಯಾತರ ತಾಲೂಕು ಘಟಕದ ಮಾಜಿ ಅಧ್ಯಕ್ಷ ರಿಜ್ವಾನ್ ಪಾಷ, ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿಯ ಜಂಟಿ ಸಂಯೋಜಕ ಇಮ್ದಾದ್ ವುಲ್ಲಾ, ತಾಲೂಕು ಗ್ಯಾರೆಂಟಿ ಯೋಜನೆ ಸಮಿತಿ ಸದಸ್ಯರಾದ ಸಿಬ್ಕತ್ ವುಲ್ಲಾ, ಮಹಮದ್ ಮಾಜ್, ಜಿಲ್ಲಾ ವಕ್ಪ್ ಬೋರ್ಡ್ ಮಾಜಿ ಸದಸ್ಯ ಸೈಯದ್ ಈಜಾದ್ (ಚಿಚಾ) ಮುಖಂಡರುಗಳಾದ ಆರಿಫ್ ಉಲ್ಲಾ ಇಮ್ರಾನ್ ಖಾನ್ ಮತ್ತಿತರ ಮುಖಂಡರು ಉಪಸ್ಥಿತರಿದ್ದರು
