(ವರದಿ:ಸಿದ್ದರಾಜು,ಕೊಳ್ಳೇಗಾಲ)
ಕೊಳ್ಳೇಗಾಲ: ಕೊಳ್ಳೇಗಾಲ ಪಟ್ಟದ ಕಾರ್ನರ್ ಸ್ಟೋನ್ ಪಿಯು ಕಾಲೇಜಿನಲ್ಲಿ ಮಾಜಿ ಸಚಿವ ಹಾಗೂ ರಾಜ್ಯ ಬಿಜೆಪಿ ಉಪಾಧ್ಯಕ್ಷ ಎನ್. ಮಹೇಶ್ ಅವರ 70 ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಲಾಯಿತು.
ಕಾಲೇಜು ಆವರಣದಲ್ಲಿ ಆಯೋಜಿಸಲಾಗಿದ್ದ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಕಾಲೇಜು ಚೇರ್ಮನ್ ಆಗಿರುವ ಎನ್. ಮಹೇಶ್ ಅವರನ್ನು ಸನ್ಮಾನಿಸಿ ಗೌರವಿಸ ಲಾಯಿತು. ನಂತರ ಪ್ರಾಂಶುಪಾಲರು ಹಾಗೂ ವಿದ್ಯಾರ್ಥಿಗಳ ಸಮ್ಮುಖದಲ್ಲಿ ಕೇಕ್ ಕತ್ತರಿ ಸಿಹಿ ಹಂಚಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಕಾಲೇಜು ಕಾರ್ಯದರ್ಶಿ ಹಾಗೂ ಪ್ರಿನ್ಸಿಪಾಲರಾದ ರೋಷನ್ ಪ್ರಿನ್ಸ್ ಅವರು ಕೊಳ್ಳೇಗಾಲ ಪಟ್ಟಣದಲ್ಲಿ ಕಾರ್ನರ್ ಸ್ಟೋನ್ ಕಾಲೇಜು ಪ್ರಾರಂಭವಾಗಲು ಮುಖ್ಯ ಕಾರಣ ಮಾಜಿ ಶಾಸಕರಾದ ಎನ್ ಮಹೇಶ್ ಅವರು ಎಂದು ತಿಳಿಸಿದರು.
ಕಾಲೇಜು ಪ್ರಾರಂಭ ಮಾಡಲು ಶುರು ಮಾಡಿದ ಮೇಲೆ ಅನೇಕ ಅಡೆತಡೆಗಳು ಬಂದವು, ಸುಮಾರು ಜನರು ಇವರು ಕಾಲೇಜು ಮಾಡಲು ಸಾಧ್ಯವೇ ಎಂದು ಹೀಯಾಳಿಸಿದ್ದರು. ಆದರೆ ಎನ್. ಮಹೇಶ್ ಅವರು ಶಿಕ್ಷಣ ಸಚಿವರಾಗಿದ್ದಾಗ ನಮಗೆ ಬೆಂಬಲವಾಗಿ ನಿಂತು ಕಾಲೇಜು ಪ್ರಾರಂಭ ಮಾಡಲು ಸಹಕಾರ ಮಾಡಿದರು ಎಂದು ಶ್ಲಾಘಿಸಿದರು.
ಕಾರ್ನರ್ ಸ್ಟೋನ್ ಕಾಲೇಜು ಪ್ರಾರಂಭವಾದಾಗ 6 ವಿದ್ಯಾರ್ಥಿಗಳ ಮಾತ್ರ ದಾಖಲಾಗಿದ್ದರು, ಈಗ 200 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ನಮ್ಮ ಕಾಲೇಜು ವಿದ್ಯಾರ್ಥಿಗಳು ಕೇವಲ ಪಠ್ಯ ಚಟುವಟಿಕೆಗಷ್ಟೇ ಸೀಮಿತವಾಗಿರದೆ ಕ್ರೀಡೆ, ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿಯೂ ಸಾಧನೆಯನ್ನು ಮಾಡಿದ್ದಾರೆ. ಇದಕ್ಕೆಲ್ಲ ಮಹೇಶ್ ಅವರು ಕೊಟ್ಟ ಸಹಕಾರ ಕಾರಣ ಕಾಲೇಜಿಗೆ ಇಷ್ಟೆಲ್ಲಾ ಕೊಡುಗೆ ನೀಡಿದ ಮಹೇಶ್ ಅವರ ಹುಟ್ಟು ಹಬ್ಬವನ್ನು ನಮ್ಮ ಕಾಲೇಜಿನಲ್ಲಿ ಆಚರಿಸುತ್ತಿರುವುದು ಹೆಮ್ಮೆಯ ವಿಷಯ ಎಂದು ನುಡಿದರು.
ನಂತರ ಎನ್ ಮಹೇಶ್ ಮಾತನಾಡಿ,ಹುಟ್ಟು ಸಾವು ಸಹಜ ಪ್ರಕ್ರಿಯೆ, ಒಂದು ನಿಗದಿತ ದಿನಾಂಕದಂದು ಹುಟ್ಟುತ್ತೇವೆ ಒಂದು ನಿಗದಿತ ಅವಧಿಯಲ್ಲಿ ಸಾಯುತ್ತೇವೆ, ಆದರೆ ಬದುಕಿರುವ ಮದ್ಯ ಸಾರ್ಥಕವಾದ ಕೆಲಸಗಳನ್ನು ಮಾಡಬೇಕು, ಸಮಾಜ ಸೇವೆಯಲ್ಲಿ ತೊಡಗಿಸಿ ಕೊಳ್ಳಬೇಕು ಎಂದು ಹೇಳಿದರು.
ಕಾರ್ನರ್ ಸ್ಟೋನ್ ಕಾಲೇಜು ಶಿಕ್ಷಕರು ಕಾಲೇಜನ್ನು ಅಭಿವೃದ್ಧಿ ಪಡಿಸಲು ತುಂಬಾ ಶ್ರಮ ಹಾಕಿ ಕೆಲಸ ಮಾಡುತ್ತಿದ್ದಾರೆ ಕಾಲೇಜು ಪ್ರಾರಂಭದಲ್ಲಿ 6 ವಿದ್ಯಾರ್ಥಿಗಳು ಮಾತ್ರ ದಾಖಲಾಗಿದ್ದರು ಅವರರಲ್ಲಿ ನಾಲ್ಕು ವಿದ್ಯಾರ್ಥಿಗಳು ಮುಸ್ಲಿಂ ಸಮುದಾಯದ ವಿದ್ಯಾರ್ಥಿಗಳಾಗಿದ್ದು ಅವರಿಗೆ ಕನ್ನಡ ಬರುತ್ತಿರಲಿಲ್ಲ ಶಿಕ್ಷಕರರು ತುಂಬಾ ಕಷ್ಟ ಪಟ್ಟು ಅ ಆ ಇ ಈ ಯಿಂದ ಶುರು ಮಾಡಿ ಅವರಿಗೆ ಕನ್ನಡವನ್ನು ಕಲಿಸಿದರು ಅವರಲ್ಲಿ ಐದು ವಿದ್ಯಾರ್ಥಿಗಳು ತೇರ್ಗಡೆಯಾದರು ಅದೆ ರೀತಿ ಈಗ ಕಾಲೇಜಿನಲ್ಲಿ 200 ವಿದ್ಯಾರ್ಥಿಗಳು ದಾಖಲಾಗಿ ವ್ಯಾಸಂಗ ಮಾಡುತ್ತಿದ್ದಾರೆ, ಮತ್ತು ಪ್ರತಿ ವರ್ಷ ಉತ್ತಮ ಫಲಿತಾಂಶಗಳನ್ನು ಪಡೆದುಕೊಳ್ಳುತ್ತಿದ್ದಾರೆ ಎಂದು ತಿಳಿಸಿದರು.
ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ತರಗತಿಗಳಲ್ಲಿ ಮಾಡುವ ಪಾಠ ಪ್ರವಚನಗಳ ಮೇಲೆ ಹೆಚ್ಚಿನ ಗಮನ ಕೊಡಬೇಕು ಇವತ್ತು ಮಾಡಿದ ಪಾಠವನ್ನು ಇವತ್ತೇ ಓದಿ ಅಭ್ಯಾಸ ಮಾಡಿಕೊಳ್ಳಬೇಕು ಯಾವತ್ತಿಗೂ ಕೂಡ ನಾಳೆ ಓದೋಣ ಪರೀಕ್ಷೆ ಹತ್ತಿರ ಬಂದಾಗ ಓದೋಣ ಎಂದು ಬೇಜವಾಬ್ದಾರಿತನ ತೋರಬಾರದು ಇವತ್ತಿನ ಕೆಲಸಗಳನ್ನು ಇವತ್ತೇ ಮಾಡಿದರೆ ಮಾತ್ರ ಯಶಸ್ಸು ನಿಮ್ಮದಾಗಲು ಸಾಧ್ಯ ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಕೊಳ್ಳೇಗಾಲ ಮಾಜಿ ಶಾಸಕರಾದ ಬಾಲರಾಜ್, ಹನೂರು ಬಿಜೆಪಿ ಮುಖಂಡ ನಿಶಾಂತ್, ಕಾಲೇಜು ಅಧ್ಯಕ್ಷರು, ಹಾಗೂ ಸಿಬ್ಬಂದಿ ಹಾಜರಿದ್ದರು.
