ಬೆಂಗಳೂರು,ಜೂ.1: ಡಿ.ಕೆ ಶಿವಕುಮಾರ್ ಮುಂದಿನ ಮುಖ್ಯಮಂತ್ರಿ ಆಗಲಿ ಎಂದು ರಾಜ್ಯದ ವಿವಿಧ ಭಾಗಗಳಲ್ಲಿ ಅವರ ಅಭಿಮಾನಿಗಳು ಮತ್ತು ಕಾರ್ಯಕರ್ತರು ದೇವರಲ್ಲಿ ಹರಕೆ ಕಟ್ಟಿಕೊಂಡಿದ್ದು ಎಲ್ಲರೂ ಹರಕೆ ತೀರಿಸುತ್ತಿದ್ದಾರೆ.
ಹಾಗೆಯೇ ಕೇರಳದಲ್ಲಿ ವರ್ಷಕ್ಕೊಮ್ಮೆ ತೆರೆದು(ಮೇ 30 ರಿಂದ ಜೂನ್ 24ರ ವರೆಗೆ) ದರ್ಶನ ನೀಡುವ ಪ್ರಸಿದ್ಧ ಪವರ್ಫುಲ್ ದೇವಸ್ಥಾನ ಎಂಬ ಹೆಗ್ಗಳಿಕೆ ಪಾತ್ರವಾದ ಕೊಟ್ಟಿಯಾರ್ ಮಹಾಶಿವ ದೇವಸ್ಥಾನದಲ್ಲಿ ಡಿ.ಕೆ ಶಿವಕುಮಾರ್ ಅವರು ಸಿಎಂ ಆಗಿ ಆಯ್ಕೆ ಆಗಿದ್ದಕ್ಕೆ ಯಶವಂತ ಪುರದ ಬ್ಲಾಕ್ ಕಾಂಗ್ರೆಸ್ ಮಹಿಳಾ ಅಧ್ಯಕ್ಷರಾದ ನಳಿನಿ ಕೃಷ್ಣಪ್ಪ ಮತ್ತು ಅವರ ಬೆಂಬಲಿಗರು ಹರಕೆ ತೀರಿಸಿದರು.
ಹರಕೆ,ಪೂಜಾ ಕೈಂಕರ್ಯ ನೆರವೇರಿಸಿ ಡಿಕೆಶಿ ಅವರಿಗೆ ಇನ್ನಷ್ಟು ಹೆಚ್ಚಿನ ಅಧಿಕಾರ ಆಯಸ್ಸು ಆರೋಗ್ಯ ನೀಡಲಿ ಎಂದು ಪ್ರಾರ್ಥಿಸಿದ್ದಾರೆ.
