ಮೈಸೂರು: ಕೆ ಆರ್ ಕ್ಷೇತ್ರದಲ್ಲಿ ಗೋ ಹತ್ಯೆಗೆ ಅವಕಾಶ ನೀಡುವುದಿಲ್ಲ ಎಂದು ಶಾಸಕ ಶ್ರೀವತ್ಸ ಹೇಳಿದರು.
ನಾಚನಹಳ್ಳಿ ಪಾಳ್ಯದ ಪಕ್ಕದಲ್ಲಿರುವ ಪ್ರಕೃತಿ ಬಡಾವಣೆಯಲ್ಲಿ ಕಡಿದು ಹಾಕಿದ್ದ ಹಸುವಿನ ಅವಶೇಷಗಳನ್ನು ಹಾಕಿದ್ದ ಸ್ಥಳಕ್ಕೆ ಭೇಟಿ ನೀಡಿ ಸ್ಥಳಿಯ ಪೊಲೀಸ್ ನಿರೀಕ್ಷಕರಾದ ಯೋಗಾಂಜನಪ್ಪ ಅವರಿಂದ ಮಾಹಿತಿ ಪಡೆದು ನಂತರ ಮಾತನಾಡಿದರು.
ಸೋಮವಾರ ರಾತ್ರಿ 10.30 ರಲ್ಲಿ ಹಸುವಿನ ಕತ್ತಿನ ಭಾಗವನ್ನು ಕೊಚ್ಚಿ ಇಲ್ಲಿ ತಂದು ಬಿಸಾಡಿದ್ದಾರೆ. ಇದು ಹೊರಗಿನಿಂದ ತಂದು ಬಿಸಾಡಿರಬಹುದು ಅಥವಾ ಅಕ್ಕಪಕ್ಕದ ವರು ಬಿಸಾಡಿರಬಹುದು ಈಗಾಗಲೇ ಈ ಸಂಬಂಧ ಎಫ್.ಐ.ಆರ್ ದಾಖಲಾಗಿದೆ ಎಂದು ಯೋಗಾಂಜನಪ್ಪ ಅವರು ಶಾಸಕರಿಗೆ ಮಾಹಿತಿ ನೀಡಿದರು.
ರಾತ್ರಿ ವೇಳೆ ಗರುಡಾ ವಾಹನಗಳು ಹೆಚ್ಚಾಗಿ ಈ ಭಾಗದಲ್ಲಿ ಓಡಾಡಬೇಕು, ನನ್ನ ಕ್ಷೇತ್ರದಲ್ಲಿ ಗೋವಧೆ ಮಾಡುವುದನ್ನು ತಡೆಯಬೇಕು ಅಂತ ಕೃತ್ಯ ಮಾಡಿದವರ ವಿರುದ್ಧ ಎಫ್ಐಆರ್ ದಾಖಲಿಸಬೇಕು ಎಂದು ಒತ್ತಾಯಿಸಿದರು.
ನನ್ನ ಕ್ಷೇತ್ರ ವ್ಯಾಪ್ತಿಯಲ್ಲಿ ಗೋಹತ್ಯೆಗೆ ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ,ಇದರ ಬಗ್ಗೆ ಸೂಕ್ತ ಕ್ರಮ ಜರುಗಿಸಬೇಕೆಂದು ವೃತ್ತ ನಿರೀಕ್ಷಕರಿಗೆ ತಿಳಿಸಿದರು.
ಈ ಸಂದರ್ಭದಲ್ಲಿ ಕ್ಷೇತ್ರದ ಅಧ್ಯಕ್ಷರಾದ ಗೋಪಾಲ್ ರಾಜೇ ಅರಸ್, ಬಿಜೆಪಿ ಮುಖಂಡರಾದ ಈಶ್ವರ್, ಜಯರಾಮ್, ವಡಿವೇಲು, ಪ್ರದೀಪ್ ಕುಮಾರ್, ಕಿಶೋರ್, ಕೀರ್ತಿ, ಕಿರಣ್, ಹರ್ಷ, ಶಾಸಕರ ಆಪ್ತ ಸಹಾಯಕ ಆದಿತ್ಯ ಹಾಗೂ ಸ್ಥಳೀಯ ನಿವಾಸಿಗಳು ಹಾಗೂ ಪೊಲೀಸ್ ಸಿಬ್ಬಂದಿ ಹಾಜರಿದ್ದರು.
