ಮೈಸೂರು: ಮೈಸೂರಿನ ಕೇವಲ 11 ವರ್ಷದ ಬಾಲಕಿ ಧನ್ಯಶ್ರೀ ಎಸ್ ಕೇವಲ 15 ದಿನಗಳಲ್ಲಿ ಮಕ್ಕಳಿಗಾಗಿ 36 ಪುಟಗಳ ಮಕ್ಕಳ ರಾಮಾಯಣ ಕೈ ಬರಹ ಪುಸ್ತಕ ರಚನೆ ಮಾಡುವ ಮೂಲಕ ಅಪರೂಪದ ಸಾಧನೆ ಮಾಡಿದ್ದಾರೆ.
ಬಾಲಕಿ ಧನ್ಯಶ್ರೀ ಸಾಧನೆಯನ್ನು ಗುರುತಿಸಿ ಹೆಬ್ಬಾಳದಲ್ಲಿರುವ ಶ್ರೀ ಜ್ಞಾನೇಶ್ವರಿ ವಿದ್ಯಾ ಸಂಸ್ಥೆಯ ಆವರಣದಲ್ಲಿ
ಕೆ ಎಂ ಪಿ ಕೆ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಗೌರವಿಸಿ ಅಭಿನಂದಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಹಿರಿಯ ಸಮಾಜ ಸೇವಕ ರಘುರಾಮ್ ವಾಜಪೇಯಿ ಅವರು, ಬಾಲ ಪ್ರತಿಭೆ
ಧನ್ಯಶ್ರೀ ಸಾಧನೆ ಅನನ್ಯವಾದುದು, 2ನೇ ಶತಮಾನದ ಶ್ರೀ ಶಂಕರಾಚಾರ್ಯರ 8ನೇ ವರ್ಷದ ಸಾಧನೆ ನೆನಪಿಗೆ ಬರುತ್ತದೆ, ಮಕ್ಕಳಿಂದ ಪೋಷಕರಿಗೆ ಹೆಸರು ಬರುವಂತಹ ವಿಶೇಷ ಪ್ರಸಂಗವಾಗಿದೆ ಎಂದು ಬಣ್ಣಿಸಿದರು.
ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ನಾರಾಯಣಗೌಡ ಅವರು ಮಾತನಾಡಿ,
ಯುವ ಪೀಳಿಗೆಯಲ್ಲಿ ಓದುವ ಹವ್ಯಾಸ ಬರವಣಿಗೆ ಮತ್ತು ಭಾರತೀಯ ಮಹಾಕಾವ್ಯಗಳ ಬಗ್ಗೆ ಆಸಕ್ತಿ ಮೂಡಿಸಲು ಈ ಕೃತಿ ಸ್ಪೂರ್ತಿದಾಯಕವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕೈಗಾರಿಕಾ ಸಂಸ್ಥೆಯ ಅಧ್ಯಕ್ಷರಾದ ಲಿಂಗರಾಜು ಅವರು ಮಾತನಾಡಿ, ಬಾಲಕಿಯ ಸಾಧನೆಯಿಂದ ಪೋಷಕರು, ಶಾಲೆ ಮತ್ತು ನಮ್ಮ ಮೈಸೂರಿಗೆ ಕೀರ್ತಿ ತಂದಕೊಟ್ಟ ಈ ಬಾಲಕಿಯ ಸಾಧನೆ ಅನನ್ಯ ಎಂದು ಕೊಂಡಾಡಿದರು.
ಈ ವೇಳೆ ಕೆಎಂಪಿಕೆ ಟ್ರಸ್ಟ್ ಅಧ್ಯಕ್ಷರಾದ ವಿಕ್ರಂ ಅಯ್ಯಂಗಾರ್, ಎಸ್.ಎನ್ ರಾಜೇಶ್, ಮಹಾನ್ ಶ್ರೇಯಸ್,
ಪ್ರಾಂಶುಪಾಲರಾದ ನಂಜುಂಡಸ್ವಾಮಿ, ಆಡಳಿತಾಧಿಕಾರಿ ಗಿರೀಶ್,
ತಂದೆ ಡಾ. ಶ್ರೀರಾಮ್, ತಾಯಿ ಸಮತ ಶ್ರೀರಾಮ್ ಹಾಗೂ ಶಾಲೆಯ ಶಿಕ್ಷಕ ವೃಂದ ಹಾಜರಿದ್ದರು.
