ಮೈಸೂರು: ಲಯನ್ಸ್ ಕ್ಲಬ್ ಆಫ್ ಮೈಸೂರು ಅಂಬಾಸಿಡರ್ಸ್ ಸಂಸ್ಥೆಯು ಜಿಲ್ಲೆಯಲ್ಲಿ ದ್ವಿತೀಯ ಅತ್ಯುತ್ತಮ ಕ್ಲಬ್ ಎಂಬ ಪ್ರತಿಷ್ಠಿತ ಗೌರವವನ್ನು ಪಡೆದು ಹಲವು ವಿಭಾಗಗಳಲ್ಲಿ ಅತ್ಯುತ್ತಮ ಸಾಧನೆಗಾಗಿ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದೆ.
ಅದಕ್ಕಾಗಿ ಲಯನ್ಸ್ ಇಂಟರ್ನ್ಯಾಷನಲ್ ಜಿಲ್ಲೆ 317ಜಿ ವತಿಯಿಂದ 2025–26ನೇ ಸಾಲಿನ ಜಿಲ್ಲಾ ರಾಜ್ಯಪಾಲರಾದ ಕೆ ಎಲ್ ರಾಜಶೇಖರ ಅವರು ಸಂಭ್ರಮ ಅಚೀವರ್ಸ್ ಅವಾರ್ಡ್ಸ್–2026 ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸಂತಸ ವ್ಯಕ್ತಪಡಿಸಿದರು.
ಕ್ಲಬ್ ಅಧ್ಯಕ್ಷರಾದ ಲಯನ್ ಡಾ. ಆರ್. ಡಿ. ಕುಮಾರ್, ಕಾರ್ಯದರ್ಶಿ ಲಯನ್ ಕೆ. ಟಿ. ವಿಷ್ಣು, ಖಜಾಂಚಿ ಲಯನ್ ಡಾ. ಜಿ. ಕಿಶೋರ್ ಅವರಿಗೆ ಜಿಲ್ಲಾ ರಾಜ್ಯಪಾಲರ ವಿಶೇಷ ಪ್ರಶಂಸಾ (Rejoice Award) ಲಭಿಸಿತು. ಅತ್ಯುತ್ತಮ ಸ್ಕ್ರಾಪ್ ಬುಕ್ ಹಾಗೂ ಪೀಸ್ ಪೋಸ್ಟರ್ ಕಾರ್ಯಕ್ರಮಕ್ಕೆ ಅತ್ಯುತ್ತಮ ಬೆಂಬಲಕ್ಕಾಗಿ ಕ್ಲಬ್ಗೆ ವಿಶೇಷ ಪ್ರಶಸ್ತಿಗಳು ದೊರಕಿದವು.
ಪೀಸ್ ಪೋಸ್ಟರ್ ವಿಭಾಗದ ಅತ್ಯುತ್ತಮ ಜಿಲ್ಲಾ ಅಧ್ಯಕ್ಷರಾಗಿ ಲಯನ್ ಸಿ. ಆರ್. ದಿನೇಶ್, ಪರಿಸರ ವಿಭಾಗದ ಅತ್ಯುತ್ತಮ ಜಿಲ್ಲಾ ಅಧ್ಯಕ್ಷರಾಗಿ ಲಯನ್ ಎಂ. ಶಿವಕುಮಾರ್ ಹಾಗೂ ಅತ್ಯುತ್ತಮ ಪ್ರಾಂತ ಅಧ್ಯಕ್ಷರಾಗಿ ಲಯನ್ ಎಚ್. ಸಿ. ಕಾಂತರಾಜು ಪ್ರಶಸ್ತಿ ಪಡೆದರು. ಲಯನ್ ಎಚ್. ಸಿ. ಕಾಂತರಾಜು ಅವರಿಗೆ ಅಂತರರಾಷ್ಟ್ರೀಯ ಅಧ್ಯಕ್ಷರ ಪಿನ್ ಸಹ ಪ್ರದಾನ ಮಾಡಲಾಯಿತು.
ಕ್ಲಬ್ ಅಧ್ಯಕ್ಷ ಲಯನ್ ಡಾ. ಆರ್. ಡಿ. ಕುಮಾರ್ ಅವರಿಗೆ ಅತ್ಯುತ್ತಮ ಅಧ್ಯಕ್ಷ ಪ್ರಶಸ್ತಿ ಹಾಗೂ Outstanding Achievers Award (ADCS) ಲಭಿಸಿತು. ಹೊಸ ಲಯನ್ಸ್ ಕ್ಲಬ್ ಸ್ಥಾಪನೆಗಾಗಿ ಕ್ಲಬ್ಗೆ ವಿಶೇಷ ಪ್ರಶಸ್ತಿ ನೀಡಲಾಯಿತು.
ಅದೇ ವೇಳೆ ಲಯನ್ ಟಿ. ಎಚ್. ವೆಂಕಟೇಶ್ ಅವರಿಗೆ ಅತ್ಯುತ್ತಮ ಅಚೀವರ್ಸ್ ಸೆಕ್ರೆಟೇರಿಯಟ್ ಪ್ರಶಸ್ತಿ, International President Medal ಹಾಗೂ International President Certificate of Appreciation ಎಂಬ ಮೂರು ಪ್ರತಿಷ್ಠಿತ ಅಂತರರಾಷ್ಟ್ರೀಯ ಗೌರವಗಳು ದೊರೆತವು.
ಒಟ್ಟಾರೆ, ಲಯನ್ಸ್ ಕ್ಲಬ್ ಆಫ್ ಮೈಸೂರು ಅಂಬಾಸಿಡರ್ಸ್ ಸಂಸ್ಥೆಯು ವಿವಿಧ ವಿಭಾಗಗಳಲ್ಲಿ ಗಮನಾರ್ಹ ಸಾಧನೆ ಮಾಡಿ ಜಿಲ್ಲೆಯಲ್ಲಿ ದ್ವಿತೀಯ ಅತ್ಯುತ್ತಮ ಕ್ಲಬ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು, ಈ ಸಾಧನೆಗೆ ಕ್ಲಬ್ನ ಎಲ್ಲಾ ಪದಾಧಿಕಾರಿಗಳು, ಸದಸ್ಯರು ಹಾಗೂ ಸೇವಾ ಕಾರ್ಯಕರ್ತರನ್ನು ಗಣ್ಯರು ಅಭಿನಂದಿಸಿದರು.
