ನಂಜನಗೂಡು: ನಂಜನಗೂಡು ಪಟ್ಟಣದ ನಿವಾಸಿ ಹಾಗೂ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಕಳೆದ ಸಾಲಿನ (೨೦೨೫-೨೬) ವಿದ್ಯಾರ್ಥಿ ತೇಜಸ್ ಕುಮಾರ್ ಎಂ ಅವರು ಭಾರತೀಯ ಸೇನೆಯ ಪ್ರತಿಷ್ಠಿತ ಅಗ್ನಿವೀರ್ ಹುದ್ದೆಗೆ ಆಯ್ಕೆಯಾಗಿದ್ದಾರೆ.
ತೇಜಸ್ ಕುಮಾರ್ ಎಂ ಅವರು ಅಗ್ನಿವೀರ್ ಹುದ್ದೆಗೆ ಆಯ್ಕೆಯಾಗಿರುವುದು ಕಾಲೇಜು ಹಾಗೂ ನಂಜನಗೂಡು ನಗರದ ಜನತೆಗೆ ಹೆಮ್ಮೆಯ ವಿಷಯವಾಗಿದೆ.
ಇದೇ ಸಂದರ್ಭದಲ್ಲಿ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಸಿ.ಆರ್. ದಿನೇಶ್ ಅವರು ತೇಜಸ್ ಕುಮಾರ್ ಎಂ ಅವರನ್ನು ಹೃತ್ಪೂರ್ವಕವಾಗಿ ಅಭಿನಂದಿಸಿದರು.
“ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುವ ಅವಕಾಶ ದೊರೆತಿರುವುದು ಅತ್ಯಂತ ಗೌರವದ ಸಂಗತಿ. ದೇಶಸೇವೆಯ ಈ ಪವಿತ್ರ ಪಥದಲ್ಲಿ ಪ್ರಾಮಾಣಿಕತೆ, ಶಿಸ್ತು ಹಾಗೂ ಕರ್ತವ್ಯನಿಷ್ಠೆಯಿಂದ ಸೇವೆ ಸಲ್ಲಿಸಿ ರಾಜ್ಯ ಹಾಗೂ ರಾಷ್ಟ್ರಕ್ಕೆ ಕೀರ್ತಿ ತರಲಿ, ಅವರ ಸಾಧನೆ ನಮ್ಮ ಕಾಲೇಜಿನ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಲಿ ಎಂದು ಶುಭ ಹಾರೈಸಿದರು.
ತೇಜಸ್ ಕುಮಾರ್ ಎಂ ಅವರ ಮುಂದಿನ ಸೈನಿಕ ಸೇವಾ ಜೀವನ ಯಶಸ್ವಿಯಾಗಲಿ, ಉತ್ತಮ ಆರೋಗ್ಯ, ಧೈರ್ಯ ಮತ್ತು ರಾಷ್ಟ್ರಸೇವೆಯ ಮನೋಭಾವದೊಂದಿಗೆ ಉನ್ನತ ಸಾಧನೆಗಳನ್ನು ಮಾಡಲಿ ಎಂದು ರಾಜಶಾಸ್ತ್ರ ಉಪನ್ಯಾಸಕ ಹೆಚ್.ಕೆ. ಸ್ವಾಮಿಗೌಡ ಅವರು ಶುಭ ಕೋರಿದರು.
ಅಭಿನಂದನೆ ಸ್ವೀಕರಿಸಿದ ತೇಜಸ್ ಕುಮಾರ್ ಎಂ ಅವರು ಮಾತನಾಡಿ, ಈ ಸಾಧನೆಗೆ ಕಾಲೇಜಿನ ಪ್ರಾಂಶುಪಾಲರು ಮತ್ತು ಉಪನ್ಯಾಸಕರು ಮುಖ್ಯ ಕಾರಣ. ಅವರು ನೀಡುತ್ತಿದ್ದ ಸಲಹೆ ಸೂಚನೆಗಳನ್ನು ನಾನು ತಪ್ಪದೆ ಪಾಲಿಸುತ್ತಿದೆ. ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ಜೀವನದಲ್ಲಿ ಶಿಸ್ತು, ನಡುವಳಿಕೆ ಶ್ರದ್ದೆ ಮತ್ತು ದೃಢ ಸಂಕಲ್ಪ ತೊಟ್ಟರೆ ಗುರಿ ಸಾಧಿಸಬಹುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಕಾಲೇಜಿನ ಉಪನ್ಯಾಸಕರಾದ ಎಸ್ ಲಿಂಗಣ್ಣ ಸ್ವಾಮಿ,ಹೆಚ್ ಕೆ. ಪ್ರಕಾಶ್ ,ಡಾ. ಕೆ ಮಾಲತಿ, ಡಾ ಸುಮಾ, ಸ್ವಾಮಿ ಗೌಡ ,
ಭವ್ಯ ,ರೂಪ ,ರಾಮಾನುಜಂ ,ನಾಗರಾಜು, ಅಂಬಿಕಾ ಪದ್ಮಾವತಿ, ದಿನೇಶ್, ಹರೀಶ್, ನಾಗರಾಜರೆಡ್ಡಿ, ಆದಿಲ್ ಹುಸೇನ್, ಮೀನಾ, ವತ್ಸಲ, ಸುಮಿತ್ರ, ಮಿಲ್ಟನ್ ಹಾಜರಿದ್ದರು.
