ಮೈಸೂರು: ಇದೇ ಆಗಸ್ಟ್ 11ರಂದು
ಸನಾತನ ಫೌಂಡೇಶನ್, ಬೆಂಗಳೂರು ವತಿಯಿಂದ ವಿಶಿಷ್ಟ ಹಾಗೂ ಸಾಮಾಜಿಕ ಕಳಕಳಿಯುಳ್ಳ ವಿಶ್ವದಾಖಲೆ ಪ್ರಯತ್ನವನ್ನು
ಹಮ್ಮಿಕೊಳ್ಳಲಾಗಿದೆ.
ಬೆಂಗಳೂರು ಮೂಲದ ಒನ್ ಮಿನಿಟ್ ಉಮಾ ಖ್ಯಾತಿಯ ಉಮಾ ಜಯಕುಮಾರ್ ಅವರು,ಈಗಾಗಲೇ ಸಿಲ್ಕ್ ಸೀರೆ ಉಡಿಸುವುದು, ಕೇಶವಿನ್ಯಾಸ ಹಾಗೂ ಸಂಪೂರ್ಣ ಮೇಕ್ ಓವರ್ ಕ್ಷೇತ್ರಗಳಲ್ಲಿ ಹಲವು ದಾಖಲೆಗಳನ್ನು ನಿರ್ಮಿಸಿದ್ದಾರೆ.
ಆಗಸ್ಟ್ 11 ರಂದು ಮದ್ಯಾಹ್ನ 1ಗಂಟೆಗೆ ಬೆಂಗಳೂರು-ಮೈಸೂರು ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿನ ಸಂಚರಿಸುತ್ತಿರುವಾಗಲೇ ಬೋಗಿಯಲ್ಲಿಯೇ, ಮೈಸೂರು ತಲುಪುವ ಮೊದಲೇ 20 ಮಹಿಳೆಯರಿಗೆ ಸಂಪೂರ್ಣ ಮೇಕ್ಓವರ್ (ಕೇಶದಿನ್ಯಾಸ, ಮೇಕಪ್ ಹಾಗೂ ಸೀರೆ ಉಡಿಸುವಿಕೆ) ಮಾಡುವ ವಿಶಿಷ್ಟ ವಿಶ್ವದಾಖಲೆ ಪ್ರಯತ್ನವನ್ನು ಅವರು ಕೈಗೊಳ್ಳಲಿದ್ದಾರೆ ಎಂದು ಮೈಸೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಸನಾತನ ಫೌಂಡೇಷನ್ ನವರು ತಿಳಿಸಿದರು.
ಈ ವಿಶ್ವದಾಖಲೆ ಪ್ರಯತ್ನದಲ್ಲಿ 6 ಮಂದಿ ಮಹಿಳಾ ಪೌರಕಾರ್ಮಿಕರು, ಇಬ್ಬರು ಕೆ.ಎಸ್.ಆರ್.ಟಿ.ಸಿ ಬಸ್ ಮಹಿಳಾ ಕಂಡಕ್ಟರ್, 4 ಜನ ಮಹಿಳಾ ಆಟೋಚಾಲಕಿಯರು, ಅಬಲಾಶ್ರಮದ 10 ಯುವತಿಯರು ಒಟ್ಟು 20 ಮಹಿಳೆಯರು ಈ ಕಾರ್ಯಕ್ರಮದ ಭಾಗವಾಗಲಿದ್ದಾರೆ ಎಂದು ಹೇಳಿದರು.
ಚಲಿಸುತ್ತಿರುವ ವೇಗದ ರೈಲಿನ ಸೀಮಿತ ಸ್ಥಳಾವಕಾಶದಲ್ಲಿ ಈ ಸಾಹಸಮಯ ಸಾಧನೆಯನ್ನು ಪೂರ್ಣಗೊಳಿಸುವುದು ವಿಶ್ವದಲ್ಲೇ ಅಪರೂಪದ ಪ್ರಯತ್ನವಾಗಿದೆ.
ಮಹಿಳಾ ಸಬಲೀಕರಣ, ಅತ್ಯವಿಶ್ವಾಸ ಹಾಗೂ ಸಾಮಾಜಿಕ ಸಮಾನತೆಯ ಸಂದೇಶವನ್ನು ಸಾರುವ ಈ ಕಾರ್ಯಕ್ರಮವು ವಿಶೇಷ ಮಹತ್ವ ಹೊಂದಿದೆ.
ಈ ಅಪರೂಪದ ವಿಶ್ವದಾಖಲೆ ಪ್ರಯತ್ನವನ್ನು ವೀಕ್ಷಿಸಿ, ಅದರ ದಾಖಲಾತಿಯನ್ನು ಪರಿಗಣಿಸುವ ಸಲುವಾಗಿ ಲಿಮ್ಕಾಬುಕ್ ಆಫ್ ರೆಕಾರ್ಡ್ನ ಅಧಿಕಾರಿಗಳಿಗೂ ಅಧಿಕೃತವಾಗಿ ಆಹ್ವಾನ ನೀಡಲಾಗಿದೆ ಎಂದು ಮಾಹಿತಿ ನೀಡಿದರು.
ಸಂಚರಿಸುತ್ತಿರುವ ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿನೊಳಗೆ ಕೇವಲ ಎರಡು ಗಂಟೆಗಳಿಗಿಂತ ಕಡಿಮೆ ಅವಧಿಯಲ್ಲಿ ೨೦ ಮಹಿಳೆಯರಿಗೆ ಸಂಪೂರ್ಣ ಮೇಕ್ ಓವರ್ ಮಾಡುವ ಈ ಅಪರೂಪದ ಸಾಧನೆಯನ್ನು ಲಿಮ್ಕಾ ಬುಕ್ ಆಫ್ ರೆಕಾರ್ಡ್ ನಲ್ಲಿ ದಾಖಲಿಸುವ ನಿರೀಕ್ಷೆಯಿದೆ ಎಂದು ತಿಳಿಸಿದರು.
ಈ ಮೇಲಿನ ಎಲ್ಲಾ ಕಾರ್ಯಕ್ರಮಗಳು ಸುತ್ತೂರು ಮಠದ ಪೂಜ್ಯ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳವರ ಆಶೀರ್ವಾದ ಮಾರ್ಗದರ್ಶನ ಹಾಗೂ ಸಾರಥ್ಯದಲ್ಲಿ ನಡೆಯುತ್ತಿವೆ ಎಂದು ಹೇಳಿದರು.
ಬೆಂಗಳೂರಿನಿಂದ ವಂದೇ ಭಾರತ್ ಎಕ್ಸ್ಪ್ರೆಸ್ ಮೂಲಕ ಅಗಮಿಸುವ ಸನಾತನ ಫೌಂಡೇಶನ್ನ ಪದಾಧಿಕಾರಿಗಳು,ಉಮಾ ಜಯಕುಮಾರ್ ಹಾಗೂ ವಿಶ್ವದಾಖಲೆ ಪ್ರಯತ್ನದಲ್ಲಿ ಭಾಗವಹಿಸುತ್ತಿರುವ ೨೦ ಮಹಿಳೆಯರು ಮೈಸೂರು ರೈಲು ನಿಲ್ದಾಣದಿಂದ ಬಸ್ ಮೂಲಕ ಸುತ್ತೂರು ಮಠಕ್ಕೆ ತೆರಳಿ, ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳವರ ಆಶೀರ್ವಾದ ಪಡೆದು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಉಮಾ ಜೈಕುಮಾರ್ ಉಪಸ್ಥಿತರಿದ್ದರು, ಅಭಿಷೇಕ್ ಕುಲಕರ್ಣಿ, ಅಶ್ವಿನಿ, ಗೋಲ್ಡನ್ ಸುರೇಶ್, ಲಯನ್ ಪ್ರಮೀಳಾ ಉಪಸ್ಥಿತರಿದ್ದರು
