ಯಾದಗಿರಿ: ಕ್ರೂಸರ್ ಹಾಗೂ ಬೈಕ್ ಮುಖಾಮುಖಿ ಡಿಕ್ಕಿಯಾಗಿ ಸ್ಥಳದಲ್ಲೇ ಇಬ್ಬರು ಸವಾರರು ಮೃತಪಟ್ಟ ಘಟನೆ
ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಆಲ್ದಾಳ ರಸ್ತೆಯಲ್ಲಿ ನಡೆದಿದೆ.
ಬೈಕ್ ಗೆ ಕ್ರೂಸರ್ ಡಿಕ್ಕಿ ಹೊಡೆದು ರಸ್ತೆ ಬದಿಯಲ್ಲಿ ಉರುಳಿಬಿದ್ದಿದೆ.
ಗೋಗಿ ಗ್ರಾಮದ ನಿವಾಸಿಗಳಾದ ಇಬ್ಬರು ಯುವಕರು ಮೃತಪಟ್ಟಿದ್ದಾರೆ.ಸಧ್ಯಕ್ಕೆ ಮೃತರ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.
ಯುವಕರು ಗೋಗಿ ಗ್ರಾಮದಿಂದ ವಿಜಯಪುರ ಜಿಲ್ಲೆಯ ತಾಳಿಕೋಟೆಗೆ ಸಂಬಂಧಿಯೊಬ್ಬರ ವಿವಾಹಕ್ಕೆ ಬೈಕ್ ನಲ್ಲಿ ತೆರಳುತ್ತಿದ್ದರು ಎಂದು ಗೊತ್ತಾಗಿದೆ.
ಭಯದಿಂದ ಕ್ರೂಸರ್ ವಾಹನ ವನ್ನು ಹಾಗೆಯೇ ಬಿಟ್ಟು ಚಾಲಕ ಹಾಗೂ ಪ್ರಯಾಣಿಕರು ಓಡಿಹೋಗಿದ್ದಾರೆ.
ಸ್ಥಳಕ್ಕೆ ಕೆಂಭಾವಿ ಪೊಲೀಸರು ಭೇಟಿ ನೀಡಿ ಪರಿಶೀಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
