ಮೈಸೂರು: ಶ್ರೀ ಪುಟ್ಟವೀರಮ್ಮ ವಿಶೇಷ ಮೂಕ ಮತ್ತು ಕಿವುಡ ಶಾಲೆಯಲ್ಲಿ ಲಯನ್ಸ್ ಅಂಬಾಸಿಡರಸ್ ಸಂಸ್ಥೆಯ ಮಾಸಿಕ ಸೇವಾ ಚಟುವಟಿಕೆ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಲಯನ್ಸ್ ಅಂಬಾಸಿಡರ್ಸ್ ಸಂಸ್ಥೆಯ
ಕಾರ್ಯದರ್ಶಿ ಲಯನ್ ವಿಷ್ಣು ಅವರ ಇಬ್ಬರು ಪುತ್ರರಾದ ಚಿರಂತ್ ಮತ್ತು ಕುಶಂತ್ ಹುಟ್ಟುಹಬ್ಬವನ್ನು ಶ್ರೀ ಪುಟ್ಟವೀರಮ್ಮ ವಿಶೇಷ ಮೂಕ ಮತ್ತು ಕಿವುಡ ಶಾಲೆಯಲ್ಲಿ
ಆಚರಿಸಲಾಯಿತು.
ಎಲ್ಲಾ ಮಕ್ಕಳಿಗೆ ಸಿಹಿ ತಿಂಡಿ ಮತ್ತು ಆಹಾರವನ್ನು ವಿತರಿಸಲಾಯಿತು.ಈ ವೇಳೆ ಶ್ವೇತಾ ವಿಷ್ಣು ಮತ್ತಿತರರು ಹಾಜರಿದ್ದರು.
