ಮೈಸೂರು: ಮೈಸೂರಿನ ಕೃಷ್ಣರಾಜ ಕ್ಷೇತ್ರದ,ನಾಚನಹಳ್ಳಿ ಪಾಳ್ಯದ ಮಲೈ ಮಹದೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಅನ್ನದಾನ ಮತ್ತು ಪೂಜಾ ಕಾರ್ಯಕ್ರಮ ವಿಜೃಂಭಣೆಯಿಂದ ನಡೆಯಿತು.
ಕೃಷ್ಣರಾಜ ಕ್ಷೇತ್ರದ ಕಾಂಗ್ರೆಸ್ ಮುಖಂಡರಾದ
ಎನ್.ಎಂ.ನವೀನ್ ಕುಮಾರ್ ಕಾರ್ಯಕ್ರಮದಲ್ಲಿ ಭಾಗವಹಿಸಿ ದೇವರ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು.
ಇದೆ ಸಂದರ್ಭದಲ್ಲಿ ನೂರಾರು ಜನ ಭಕ್ತರಿಗೆ ಸಮಿತಿಯ ವತಿಯಿಂದ ಅನ್ನ ಸಂತರ್ಪಣೆ ನಡೆಯಿತು.
ನವೀನ್ ಕುಮಾರ್ ರವರಿಗೆ ದೇವಸ್ಥಾನದ ಆಡಳಿತ ಸಮಿತಿ ವತಿಯಿಂದ ಗೌರವ ಸಲ್ಲಿಸಲಾಯಿತು.
ಕಾರ್ಯಕ್ರಮದಲ್ಲಿ ಸಮಿತಿಯ ಅಧ್ಯಕ್ಷರಾದ ಶಿವಶಂಕರ ಮೂರ್ತಿ,ಕಾರ್ಯದರ್ಶಿ ರಂಗಸ್ವಾಮಿ,ಟ್ರಸ್ಟಿಗಳಾದ ಚಂದ್ರು ಶೇಖರ್,ಸೋಮಶೇಖರ್,
ಮಹೇಶ್,ಶಿವಶಂಕರ್,ವಿಜಯ್ ಕುಮಾರ್,
ಚೆಲುವರಾಜು,ಗಣೇಶ್ ಹಾಗೂ
ಜೈ ಭೀಮ್ ಘರ್ಜನೆ ಯುವಕರ ಸಂಘದ ಮುಖಂಡರಾದ ಶಶಿಕಾಂತ್. ಎಸ್,
ವಿನೋದ್,ಶ್ರೀಧರ್, ರಘು,
ಪ್ರತಾಪ್,ಮೈಸೂರಿನ ದತ್ತ ಸೇನೆಯ ಅಧ್ಯಕ್ಷರಾದ ಆರ್.ಎಸ್.ಸತ್ಯನಾರಾಯಣ ಮತ್ತಿತರರು ಬಾಗವಹಿಸಿದ್ದರು.
