ಬಹ್ರೇನ್: ತನ್ನ ಪರಮೋಚ್ಛ ನಾಯಕ ಆಯತೊಲ್ಲ ಖಮೇನಿ ಹತ್ಯೆಯಿಂದ ಕೆರಳಿ ಕೆಂಡವಾಗಿರುವ ಇರಾನ್ ಅಮೇರಿಕಾ ಮತ್ತು ಇಸ್ರೇಲ್ ಮೇಲೆ ಸತತ ದಾಳಿ ಮುಂದುವರಿಸಿದೆ.
ಬಹ್ರೇನ್ನಲ್ಲಿರುವ ಅಮೆರಿಕದ ಮಿಲಿಟರಿ ಸೌಲಭ್ಯಗಳು ಮತ್ತು ವಸತಿ ಗೋಪುರಗಳ ಮೇಲೆ ಇರಾನ್ ಕ್ಷಿಪಣಿ ಮತ್ತು ಡ್ರೋನ್ ದಾಳಿಗಳನ್ನು ಸತತವಾಗಿ ನಡೆಸುತ್ತಲೇ ಇದೆ.
ಇರಾನಿನ ಮಿಲಿಟರಿ ನೆಲೆಗಳ ಮೇಲೆ ಅಮೆರಿಕ-ಇಸ್ರೇಲ್ ಜಂಟಿ ದಾಳಿ ನಡೆಸಿವೆ, ಆದರೆ,ಈ ಸಂಘರ್ಷಕ್ಕೆ ನೇರ ಸಂಪರ್ಕ ಹೊಂದಿಲ್ಲದ ಬಹ್ರೇನ್ ಮೇಲೂ ಇರಾನ್ ದಾಳಿ ನಡೆಸಿದೆ.ಜತೆಗೆ ಮಧ್ಯಪ್ರಾಚ್ಯ ರಾಷ್ಟ್ರಗಳ ಮೇಲೂ ದಾಳಿ ಮುಂದುವರಿಸಿದೆ.
ಇಲ್ಲಿ ಅಮೆರಿಕದ ವಾಯುನೆಲೆ ಇರುವುದರಿಂದ ಇರಾನ್ ದಾಳಿ ಮಾಡಿದೆ. ಈ ದಾಳಿಯಿಂದ ಬಹ್ರೇನ್ನ ಗಗನಚುಂಬಿ ಕಟ್ಟಡಗಳಲ್ಲಿ ಬೆಂಕಿ ಕಾಣಿಸಿಕೊಂಡಿದೆ.ಜನ ಹೊರಗೆ ಓಡಿ ಬಂದಿದ್ದಾರೆ.
ಇರಾನ್ ತನ್ನ ವಿರುದ್ಧದ ಮಿಲಿಟರಿ ದಾಳಿಗಳನ್ನು ಬೆಂಬಲಿಸುವ ದೇಶಗಳಲ್ಲಿನ ಅಮೆರಿಕದ ನೆಲೆಗಳನ್ನು ಗುರಿಯಾಗಿಸಿ ದಾಳಿ ಮಾಡುವುದಾಗಿ ಪ್ರತಿಜ್ಞೆ ಮಾಡಿತ್ತು.ಇದು ಬಹ್ರೇನ್ ಮತ್ತು ಇತರ ಗಲ್ಫ್ ರಾಷ್ಟ್ರಗಳ ಮೇಲೆ ದಾಳಿಗಳಿಗೆ ಕಾರಣವಾಗಿದೆ.ಸಾವು,ನೋವುಗಳು ಹೆಚ್ಚಾಗುತ್ತಿದೆ.
ಇರಾನ್ ಇಸ್ರೆಲ್ ಪ್ರಧಾನಿ ನೆತನ್ಯಾಹು ಅವರನ್ನ ಗುರಿಯಾಗಿಸಿ ಅವರ ಕಚೇರಿ ಮೇಲೂ ದೊಡ್ಡ ದಾಳಿ ಮಾಡಿದೆ.ಅದೃಷ್ಟ ವಶಾತ್ ಅವರು ಪಾರಾಗಿದ್ದಾರೆ.
