ಮೈಸೂರು: ಮೈಸೂರು ವಿಶ್ವವಿದ್ಯಾನಿಲಯ ಅಂತರ ಕಾಲೇಜು ಚಾಮುಂಡಿ ವಲಯ ಪಂದ್ಯಾವಳಿಯಲ್ಲಿ ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜು ವಿದ್ಯಾರ್ಥಿನಿಯರು ಬೆಳ್ಳಿ ಪದಕ ಗಳಿಸಿದ್ದಾರೆ.
ಜೆಎಸ್ಎಸ್ ಕಾಲೇಜು ಸರಸ್ವತಿಪುರಂ ಮೈಸೂರು ಇವರ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಈ ಪಂದ್ಯಾವಳಿಯಲ್ಲಿ ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜು ವಿದ್ಯಾರ್ಥಿನಿಯರಾದ ಅಂಜಲಿ ದ್ವಿತೀಯ ಬಿಎಸ್ಸಿ,ಶ್ರೀಲತಾ ಪ್ರಥಮ ಬಿ ಎಸ್ಸಿ, ಸಂಜನಾ ಪ್ರಥಮ ಬಿಸಿಎ, ಭೂಮಿಕ, ಭುವನ ದ್ವಿತೀಯ ಬಿ ಎಸ್ಸಿ ಇವರುಗಳು ಅತ್ಯುತ್ತಮವಾಗಿ ಪ್ರದರ್ಶನ ನೀಡಿ ಬೆಳ್ಳಿ ಪದಕವನ್ನು ಪಡೆದಿದ್ದಾರೆ.
ಈ ವಿದ್ಯಾರ್ಥಿನಿಯರಿಗೆ ಕಾಲೇಜಿನ ಪ್ರಭಾರ ಪ್ರಾಂಶುಪಾಲರಾದ ಪ್ರೊಫೆಸರ್ ಲೀಲಾವತಿ, ಹಾಗೂ ದೈಹಿಕ ಶಿಕ್ಷಣ ನಿರ್ದೇಶಕರಾದ ಪ್ರತಿಮಾ ಕೆ ಆರ್ ಹಾಗೂ ಕಾಲೇಜಿನ ಕ್ರೀಡಾ ಸಮಿತಿಯ ಸದಸ್ಯರು, ಬೋಧಕ ಬೋಧಕೇತರರು ಶುಭ ಹಾರೈಸಿದರು.
