ಟೆಹ್ರಾನ್: ತನ್ನ ಸರ್ವೋಚ್ಛ ನಾಯಕನನ್ನ ಕಳೆದುಕೊಂಡು ರೊಚ್ಚಿಗೆದ್ದಿರುವ ಇರಾನ್,ಇದಕ್ಕೆ ಕಾರಣವಾದ ಇಸ್ರೇಲ್ ಮತ್ತು ಅಮೇರಿಕಾ ಮೇಲೆ ಯುದ್ದ ತೀವ್ರ ಗೊಳಿಸಿದೆ.
ಗುರುವಾರ ಮುಂಜಾನೆ
ಇರಾನ್,ಖೋರ್ರಾಮ್ಶಹರ್-4 ಎಂಬ ಭಾರೀ ಕ್ಷಿಪಣಿಯನ್ನು ಇಸ್ರೇಲ್ ಮೇಲೆ ಉಡಾಯಿಸಿದೆ.
ವರದಿಯ ಪ್ರಕಾರ, ಈ ಕ್ಷಿಪಣಿ ಒಂದು ಟನ್ ತೂಕದ ಸಿಡಿತಲೆಯನ್ನು ಹೊಂದಿದ್ದು,ಸುಮಾರು 2,000 ಕಿಲೋಮೀಟರ್ ವ್ಯಾಪ್ತಿಯನ್ನು ಹೊಂದಿದೆ.
ದಿನೇ ದಿನೆ ಯುದ್ದದ ಕಾರ್ಮೋಡ ಎಲ್ಲೆಡೆ ಆವರಿಸಿಕೊಳ್ಳುತ್ತಲೇ ಇದೆ.
ಇದು ನೇರ ಮಿಲಿಟರಿ ಮುಖಾಮುಖಿಯ ಆರನೇ ದಿನವಾಗಿದ್ದು, ಇನ್ನೂ ಯುದ್ಧ ನಿಲ್ಲುವ ಲಕ್ಷಣಗಳು ಕಾಣುತ್ತಿಲ್ಲ,ಹಾಗಾಗಿ ಜಗತ್ತಿನೆಲ್ಲೆಡೆ ಆತಂಕ ಕಾಡುತ್ತಿದೆ.
ಇರಾನ್ ಮೇಲೆ ಅಮೇರಿಕಾ,ಇಸ್ರೇಲ್ ದಾಳಿಯಿಂದ ಮೃತಪಟ್ಟವರ ಸಂಖ್ಯೆ 1,000 ಕ್ಕೂ ಹೆಚ್ಚು.
ಇದಲ್ಲದೆ ಲೆಬನಾನ್ನಲ್ಲಿ 60 ಜನರು, ಇಸ್ರೇಲ್ನಲ್ಲಿ ಸುಮಾರು 15ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ, 6 ಅಮೇರಿಕಾ ಸೈನಿಕರು ಪ್ರಾಣ ಕಳೆದುಕೊಂಡಿದ್ದಾರೆ.
ಯುದ್ದ ಹೀಗೇ ಮುಂದುವರಿದರೆ ಇನ್ನೆಷ್ಟು ಸಾವು ನೋವು ಉಂಟಾಗುವುದೊ ಆ ದೇವರೆ ಬಲ್ಲ
