ಚಾಮರಾಜನಗರ: ಶ್ರೀ ಮಲೆ ಮಹದೇಶ್ವರ ಬೆಟ್ಟದ ಶ್ರೀ ಮಲೆ ಮಹದೇಶ್ವರ ಸ್ವಾಮಿ ದೇವಾಲಯದಲ್ಲಿ 3 ಕೋಟಿ ರೂ ಸಂಗ್ರಹವಾಗಿದೆ.
ಮಾ.4 ರಂದು ನಡೆದ ಎಣಿಕಾ ಕಾರ್ಯದಲ್ಲಿ ಒಂದು ತಿಂಗಳಲ್ಲಿ 3 ಕೋಟಿಗೂ ಅಧಿಕ ಹಣ ಸಂಗ್ರಹವಾಗಿದೆ.
3,41,44,208.00 ರೂ ಹಾಗೂ 71 ಗ್ರಾಂ ಚಿನ್ನ,2.50 ಕೆಜಿ ಬೆಳ್ಳಿ ಸಂಗ್ರವಾಗಿತ್ತು.
ಇದಲ್ಲದೆ 19 ವಿದೇಶಿ ನೋಟುಗಳು ಮತ್ತು 2 ಸಾವಿರ ಮುಖಬೆಲೆಯ 6 ನೋಟುಗಳು ಸಂಗ್ರಹವಾಗಿತ್ತೆಂದು ಮಲೈ ಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ತಿಳಿಸಿದ್ದಾರೆ.
