ಮೈಸೂರು: ಚಿನ್ಮಯ ಅಮೃತ ಮಹೋತ್ಸವ ಪ್ರಯುಕ್ತ ವಿವಿದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಚಿನ್ಮಯ ಮಿಷನ್ ಎಂಬ ಸಂಸ್ಥೆಯ ಉದಯಕ್ಕೆ ನಮ್ಮ ಸನಾತನ ಸಂಸ್ಕೃತಿಯನ್ನು ಇಡಿ ವಿಶ್ವಕ್ಕೆ ಪಸರಿಸಲು
ಸ್ವಾಮಿ ಚಿನ್ಮಯಾನಂದರು ಶ್ರಮಿಸಿದರು.
ಸ್ವಾಮಿ ಚಿನ್ಮಯಾನಂದರು 1951ರಲ್ಲಿ ಮೊದಲ ಗೀತಾಜ್ಞಾನ ಯಜ್ಞವನ್ನ ಪುಣೆಯಲ್ಲಿ ಪ್ರಾರಂಭಿಸಿದರು.ಈಗಾಲೇ 596 ಗೀತಾಜ್ಞಾನ ಯಜ್ಞಗಳನ್ನು ಅವರು ವಿವಿಧೆಡೆ ಮಾಡಿದ್ದಾರೆ.
ಇದೀಗ ಚಿನ್ಮಯ ಅದರ ಅಮೃತ ಮಹೋತ್ಸವ ಆಚರಣೆಯನ್ನು ಆಚರಿಸಲು ನಿರ್ಣಯಿಸಲಾಗಿದೆ.
ಈ ಸಂದರ್ಭದಲ್ಲಿ ಚಿನ್ಮಯ ಅಮೃತವಾಹಿನಿ ಎಂಬ ವಾಹನ ಭಾರತಾದ್ಯಂತ ಸಂಚರಿಸಿ ಇಂದಿನ ಪೀಳಿಗೆಗೆ ಪೂಜ್ಯ ಗುರುದೇವರ ಸಂದೇಶವನ್ನು ತಲುಪಿಸಲು ಕಾರ್ಯನಿರತವಾಗಿದೆ.
ಚಿನ್ಮಯ ರಥವು ಮೈಸೂರು ನಗರಕ್ಕೆ ಮಾರ್ಚ್ ಆರು ಮತ್ತು ಏಳರಂದು ಆಗಮಿಸಲಿದೆ.
ಸ್ವಾಮಿ ಚನ್ಮಯಾನಂದರು ಉಪಯೋಗಿಸುತ್ತಿದ್ದ ವಸ್ತುಗಳು, ಭಾವಚಿತ್ರಗಳು, ವಸ್ತ್ರ, ಹಾಗೂ ಪ್ರತಿಮೆ ಪಾದುಕೆಯನ್ನು ಹೊತ್ತು ಈ ಅಮೃತವಾಹಿನಿ ಆಗಮಿಸಲಿದೆ.
ನಾಳೆ ಬೆಳಿಗ್ಗೆ 10 ಗಂಟೆಗೆ ಗೋಕುಲಂ ಶಾಖೆಗೆ ಈ ವಾಹಿನಿಯು ಆಗಮಿಸಲಿದೆ.
ಏಳನೇ ತಾರೀಖಿನಂದು ಬೆಳಗ್ಗೆ 9 ಗಂಟೆಯಿಂದ 10 ಗಂಟೆವರೆಗೆ ಶ್ರೀರಾಮ ಕ್ಷೇತ್ರ ಸಾರ್ವಜನಿಕ ಹಾಸ್ಟೆಲ್ ರಸ್ತೆ ವಿದ್ಯಾರಣ್ಯಪುರಂ ಮೈಸೂರು ಇಲ್ಲಿ ಕಾರ್ಯಕ್ರಮ ಜರಗಲಿದೆ. ಈ ಸಂದರ್ಭದಲ್ಲಿ ಹನುಮಾನ್ ಚಾಲೀಸಾ ಸಾಮೂಹಿಕ ಪಾರಾಯಣ ನಡೆಯಲಿದೆ.
ಅಂದು ಬೆಳಿಗ್ಗೆ 11 ರಿಂದ 12:30ವರೆಗೆ ಶ್ರೀ ಶಿವಾನಂದ ಜ್ಞಾನಾಲಯ ಝಾನ್ಸಿ ಲಕ್ಷ್ಮೀಬಾಯಿ ರಸ್ತೆ, ಲಕ್ಷ್ಮಿಪುರ ಮೈಸೂರು ಇಲ್ಲಿ ಕಾರ್ಯಕ್ರಮ ಇರುತ್ತದೆ.
ಶನಿವಾರ ಸಂಜೆ 5:30 ರಿಂದ 7:30 ವರೆಗೆ ಅಭಿನವ ಶಂಕರಾಲಯ ಶಂಕರಮಠದಲ್ಲಿ ಪ್ರಮುಖ ಕಾರ್ಯಕ್ರಮ ಇದೆ.ಅಂದು ಭಗವದ್ಗೀತೆ ಸಾಮೂಹಿಕ ಪಾರಾಯಣ ಇರಲಿದೆ
ವಿವಿಧ ಶಾಖೆಗಳ ಆಚಾರ್ಯರು ಈ ಕಾರ್ಯಕ್ರಮಗಳಲ್ಲಿ ಪ್ರಮುಖವಾಗಿ ಭಾಗವಹಿಸಲಿದ್ದಾರೆ.
