ಯಳಂದೂರು: ಗ್ರೇಡ್ 2 ತಹಸಿಲ್ದಾರ್ ಹುದ್ದೆ ಅಲಂಕರಿಸಿದ ಎಂ ಶಾಂತಿ ಅವರಿಗೆ ಯಳಂದೂರು ತಾಲೂಕು ಹೊನ್ನೂರು ಗ್ರಾಮಸ್ಥರು ಮತ್ತು ಹಿತೈಷಿಗಳು ಶುಭ ಕೋರಿದರು.
ಯಳಂದೂರು ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ಕಳೆದ 12 ವರ್ಷಗಳಿಂದ ಶಿರಸ್ತೆ ದಾರರಾಗಿ ಸೇವೆ ಸಲಿಸುತಿದ್ದ ಎಂ.ಶಾಂತಿ ಅವರಿಗೆ ಮುಂಬಡ್ತಿ ನೀಡಿ ತೆರವಾಗಿದ್ದ ಉಪತಾಸಿಲ್ದಾರ್, ಗ್ರೇಡ್ 2 ತಹಸಿಲ್ದಾರ್ ಹುದ್ದೆಗೆ ಸರ್ಕಾರ ನೇಮಕ ಮಾಡಿದ್ದು ಅವರು ಉಪ ತಹಸೀಲ್ದಾರ್ ಆಗಿ ಅಧಿಕಾರ ಸ್ವೀಕರಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಹೊನ್ನೂರು ಗ್ರಾಮಸ್ಥರು ಎಂ.ಶಾಂತಿ ಅವರಿಗೆ ಶಾಲು ಹೊದಿಸಿ ಹೂವಿನ ಹಾರ ಹಾಕಿ ಸನ್ಮಾನ ಗೌರವಾ ಸಮಾರ್ಪಣೆ ಮಾಡಿದರು.
ಈ ಸಂದರ್ಭದಲ್ಲಿ ಹೊನ್ನೂರು ಗ್ರಾಮದ ಮುಖಂಡ ಎಚ್ ಸಿ ಸೋಮಣ್ಣ ಅವರು ಮಾತನಾಡಿ ಶಾಂತಿ ಅವರ ಹಿಂದಿನ ಸೇವೆಯನ್ನು ಪರಿಗಣಿಸಿ ಮತ್ತು ಇಲಾಖೆಯಲ್ಲಿ ಬಡ್ತಿ ನೀಡಿರುವುದು ತುಂಬಾ ಸಂತೋಷ ತಂದಿದೆ ಎಂದು ಹೇಳಿದರು.
ನಮ್ಮ ತಾಲೂಕಿನ ಜನರಿಗೆ ಪಾರದರ್ಶಕ ಹಾಗೂ ಜನಸ್ನೇಹಿ ಸೇವೆ ನೀಡಲು ಹೊಸ ಹುದ್ದೆಯ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸಲಿ ಎಂದು ಶುಬಾಹಾರೈಸಿರು.
ಈ ಸಂದರ್ಭದಲ್ಲಿ ಹೊನ್ನೂರು ಗ್ರಾಮದ ಮುಖಂಡರುಗಳಾದ ಹೆಚ್. ಸಿ ಸೋಮಣ್ಣ, ಹೆಚ್. ಕೆ. ಮಹದೇವಯ್ಯ, ಎಂ. ಸಿದ್ದರಾಜು,ಹೆಚ್. ಎಂ. ಶಂಕರಮೂರ್ತಿ, ಎನ್. ದುಂಡಯ್ಯ,ವಡಗೆರೆ ಮಹದೇವಸ್ವಾಮಿ ಮುಂತಾದವರು ಹಾಜರಿದರು.
