ಮೈಸೂರು: ಮೈಸೂರಿನ ಲಲಿತಮಹಲ್ ಸಮೀಪ ಜೆ ಎಸ್ ಎಸ್ ಆಯುರ್ವೇದ ಆಸ್ಪತ್ರೆ, ಆಲನಹಳ್ಳಿ ಪಾರ್ಕ್ ಬಳಿ ಲಲಿತಾದ್ರಿಪುರ ರಸ್ತೆಯಲ್ಲಿ ಆಲನಹಳ್ಳಿಗೆ ತಿರುವು ಪಡೆಯುವ ಕಡೆ ರಸ್ತೆಯನ್ನು ಅಗೆಯಲಾಗಿದೆ.
ಇದರಿಂದಾಗಿ ಭಾರೀ ಹಳ್ಳ ಉಂಟಾಗಿದ್ದು,ಅಪಾಯಕ್ಕೆ ಆಹ್ವಾನ ನೀಡಿದೆ.
ಅಭಿವೃದ್ಧಿ ಹೆಸರಲ್ಲಿ ರಸ್ತೆಯನ್ನೇನೊ ಅಗೆದಿದ್ದಾರೆ,ಆದರೆ ಒಂದು
ಸೂಚನಾ ಫಲಕವೂ ಇಲ್ಲ, ತಿರುವು ಪಡೆಯುವಾಗ ಅಪಾಯವಿದೆ ಎಂಬುದಕ್ಕೆ ಕನಿಷ್ಟ ಒಂದು ಕೆಂಪು ಬಾವುಟ ಕೂಡಾ ಹಾಕಿಲ್ಲ.
ಬೆಳಗಿನ ಸಮಯದಲ್ಲಿ ರಸ್ತೆ ಮತ್ತು ತಿರುವು ಎಲ್ಲರಿಗೂ ಕಾಣುತ್ತದೆ ಇದೇ ರಸ್ತೆಯಲ್ಲಿ ಬಹಳಷ್ಟು ಮಂದಿ ಬೆಳಗ್ಗೆ ಸಂಜೆ ವಾಕಿಂಗ್ ಗೆ ಹೋಗುತ್ತಾರೆ, ಬೆಳಿಗ್ಗೆ ಸಮಯ ಪರವಾಗಿಲ್ಲ ಆದರೆ ರಾತ್ರಿ ಸಮಯದಲ್ಲಿ ತಿರುವು ಪಡೆಯುವಾಗ ರಸ್ತೆಯಲ್ಲಿ ಉಂಟಾಗಿರುವ ಹಳ್ಳಕ್ಕೆ ಬಿದ್ದರೆ ಕೈ ಕಾಲು ಮುರಿದುಕೊಳ್ಳುವುದು ಗ್ಯಾರಂಟಿ ಜೊತೆಗೆ ಹೆಚ್ಚಿನ ಅನಾಹುತ ವಾಗುವ ಸಂಭವವಿದೆ.
ಇಷ್ಟು ಬೇಜವಾಬ್ದಾರಿಯಾಗಿ ಕಾಮಗಾರಿ ಮಾಡಿದರೆ ಹೇಗೆ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ ಕೂಡಲೇ ಇಲ್ಲಿ ಅಪಾಯದ ನಾಮಫಲಕ ಲಗತ್ತಿಸಬೇಕು ಇಲ್ಲದಿದ್ದರೆ ಶೀಘ್ರವೇ ರಸ್ತೆಯನ್ನು ಸರಿಪಡಿಸಬೇಕು, ಹಳ್ಳವನ್ನು ಮುಚ್ಚಬೇಕು ಎಂದು ನಾಗರಿಕರು ಆಗ್ರಹಿಸಿದ್ದಾರೆ.
ತಕ್ಷಣ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸುವ ಅತ್ಯಗತ್ಯವಿದೆ.
ಮತ್ತೊಂದು ವಿಷಯವೆಂದರೆ ಬೇರೆ ಎಲ್ಲೇ ಈ ರೀತಿ ಹಳ್ಳಗಳನ್ನು ತೋಡಿದಾಗ ಮರೆಯದೆ ಎಚ್ಚರಿಕೆ ಫಲಕಗಳನ್ನು ಅಳವಡಿಸಿ ಆಗಬಹಯದಾದ ಅನಾಹುತಗಳನ್ನು ತಪ್ಪಿಸಬೇಕೆಂದು ನಾಗರೀಕರು ಮನವಿ ಮಾಡಿದ್ದಾರೆ.
